ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಚಿವ ಭೈರತಿ ಸುರೇಶ್ ಅವರ ವಿಚಾರಣೆಯನ್ನು ಇ.ಡಿ ನಡೆಸಲಿ ಎಂದು ಕೇಂದ್ರ ಸಚಿವೆ ಬಿಜೆಪಿ ನಾಯಕರಾಗಿರುವ ಶೋಭಾ ಕರಂದ್ಲಾಜೆ ಆಗ್ರಹ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮುಡಾ ಹಗರಣಕ್ಕೆ ಸಂಬಂಧಪಟ್ಟಂತ ಪ್ರಮುಖ ಕಡತಗಳನ್ನು ತೆಗೆದುಕೊಂಡು ಬಂದು ಸುರೇಶ್ ಅವರು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಪತ್ನಿ ಪಾರ್ವತಿ ಮತ್ತು ಭೈರತಿ ಸುರೇಶ್ ಅವರ ವಿಚಾರಣೆಯನ್ನು ನಡೆಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.