ಬೆಂಗಳೂರು: ಬೆಂಗಳೂರು ತುಮಕೂರು ಯಾದಗಿರಿ ಮತ್ತು ಶಿವಮೊಗ್ಗ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆ ಎಸ್ ಪಿ ರವರುಗಳ ಮಾರ್ಗದರ್ಶಕದಲ್ಲಿ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿ ಮತ್ತು ನೌಕರರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.
12 ಪ್ರಕರಣಗಳಲ್ಲಿ, 54 ಜಾಗಗಳಲ್ಲಿ ಸುಮಾರು 100 ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.ತುಮಕೂರಿನ ಅಡಿಷನಲ್ ಡೈರೆಕ್ಟರ್ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ಇಲಾಖೆಯ ಸಿ ಟಿ ಮಧುಕುಮಾರ್, ಯಾದಗಿರಿ ಜಿಲ್ಲೆಯ ಬಲವಂತ ಪ್ರಾಜೆಕ್ಟ್ ಡೈರೆಕ್ಟರ್, ಯೋಜನಾ ನಿರ್ದೇಶಕರು, ಬೆಂಗಳೂರು ಗ್ರಾಮಾಂತರದ ಸಿದ್ದಪ್ಪಸೀನಿಯರ್ ವೆಟರ್ನರಿ ಆಫೀಸರ್, ನರಸಿಂಹಮೂರ್ತಿ ಮುನಿಸಿಪಲ್ ಕಮಿಷನರ್ ಹೆಬ್ಬಗೋಡಿ, ಬೆಂಗಳೂರಿನ ನಗರ ಬಿ ವಿ ರಾಜ ಎಫ್ಡಿಎ, ಕೆ ಐ ಎ ಡಿ ಬಿ ಲ್ಯಾಂಡ್ ಅಕ್ವಿಷನ್ ಆಫೀಸರ್, ಬೆಂಗಳೂರು ನಗರ ರಮೇಶ್ ಕುಮಾರ್ ಜಾಯಂಟ್ ಕಮಿಷನರ್ ಕಮರ್ಷಿಯಲ್ ಟ್ಯಾಕ್ಸ್,
ಬೆಂಗಳೂರು ನಗರ ಅಥರ್ ಆಲಿ ಡೆಪ್ಯೂಟಿ ಕಂಟ್ರೋಲರ್ ಆಫ್ ಲೀಗಲ್ ಮೆಟ್ರೋಲಜಿ, ಶಿವಮೊಗ್ಗ ಜಿಲ್ಲೆಯ ನಾಗೇಶ್ ಅಧ್ಯಕ್ಷರು ಅಂತರಗಂಗೆ ಗ್ರಾಮೀಣ ಪಂಚಾಯತ್ ಭದ್ರಾವತಿ ತಾಲೂಕು, ಶಿವಮೊಗ್ಗ ಜಿಲ್ಲೆಯ ಪ್ರಕಾಶ್ ಡೆಪ್ಯುಟಿ ಡೈರೆಕ್ಟರ್ ಆರ್ಟಿಕಲ್ಚರ್ ಡಿಪಾಟ್ರ್ಮೆಂಟ್, ಬೆಂಗಳೂರು ನಗರ ಚೇತನ್ ಕುಮಾರ್ ಲೇಬರ್ ಆಫೀಸರ್ ಲೇಬರ್ ಡಿಪಾಟ್ರ್ಮೆಂಟ್ ಮಂಡ್ಯ ವಿಭಾಗ,
ಬೆಂಗಳೂರು ನಗರ ಆನಂದ್ ಕಮಿಷನರ್ ಮಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನಗರ ಮಂಜುನಾಥ್ ಫಸ್ಟ್ ಡಿವಿಷನ್ ಕ್ಲರ್ಕ್ ಬೆಂಗಳೂರು ನಾರ್ತ್ ಸಬ್ ಡಿವಿಷನ್ ಇವರುಗಳ ಮನೆಗಳ ಮೇಲೆ ಇಂದು ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುತ್ತಾರೆ.ಚಿನ್ನಾಭರಣಗಳು ಬೆಳ್ಳಿ ಆಭರಣಗಳು , ಮನೆ ಪತ್ರಗಳು, ವಾಹನಗಳು ಹಾಗೂ ಇನ್ನೂ ಇತರೆ ವಸ್ತುಗಳನ್ನು ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.