ದೇವನಹಳ್ಳಿ: ಗ್ರಾಮೀಣ ಭಾಗದಿಂದ ಬರುವ ನಮ್ಮೆಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರಲ್ಲಿರುವ ಕೌಶಲ್ಯ ಪ್ರತಿಭೆ ಹೊರತರುವ ಮುಖ್ಯ ಉದ್ದೇಶ ದಿಂದ ಚಿನ್ಮಯಿ ಪಬ್ಲಿಕ್ ಶಾಲೆ ಶ್ರಮಿಸುತ್ತಿದೆ ಎಂದು ಶಾಲಾ ವ್ಯವಸ್ಥಾಪಕರಾದ ಡಾ.ಬಿ.ಕಿರಣ್ ಅಭಿಪ್ರಾಯಿಸಿದರು.
ದೇವನಹಳ್ಳಿ ಪಟ್ಟಣದ ಡಾ.ಬಿಆರ್.ಅಂಬೇಡ್ಕರ್ ಭವನದಲ್ಲಿ ಚಿನ್ಮಯಿ ಪಬ್ಲಿಕ್ ಶಾಲೆಯ 8 ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಡಾ.ಬಿ.ಕಿರಣ್ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿ ಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಯಲ್ಲಿ ಪಾಲ್ಗೊಳ್ಳ ಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಡ್ಯ ಹಾಗೂ ಆರೋಗ್ಯ ಹೊಂದುವಂತೆ ತಿಳಿಸಿದರು.
ಚಿನ್ಮಯಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಪಿಸಿ. ವೆಂಕಟೇಶ್ ಗೌಡ ಅವರು ಮಾತನಾಡಿ,ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋ ಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸಬೇಕು. ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರಿಸಿದರು.ಈ ಸಂದರ್ಭದಲ್ಲಿ ಚಿನ್ಮಯಿ ಪಬ್ಲಿಕ್ ಶಾಲೆಯ ನಿರ್ದೇಶಕ ರಾದ ಅರ್ಜುನ್ ಚಂದ್, ಮುಖ್ಯ ಶಿಕ್ಷಕಿ ಮೀರಾಕಿರಣ್, ಪ್ರಾಶುಪಾಲರಾದ ಶಿಕ್ಷಕರು ಮಕ್ಕಳ ಪೋಷಕರು ಹಾಜರಿದ್ದರು.