ಬೆಂಗಳೂರು: ನಗರದ ವಿವಿಧ ವೈವಿಧ್ಯಮಯವಾದ ನೃತ್ಯ ಶಾಲೆಗಳಿಂದ ವಿವಿಧ ಗುರುಗಳ ಕೊರಿಯೀಗ್ರಫಿ ಮಾಡಿದ ನೃತ್ಯ ಸಂಗಮವೇ ಕಲೆಗಳ ಉತ್ಸವ.ನಾಟ್ಯ ಪ್ರಾಕಾರಗಳಲ್ಲಿನ ವಿವಿಧ ನೃತ್ಯಗಳನ್ನು ಪ್ರದರ್ಶಿಸುವ ವೇದಿಕೆ ಕಲೆಗಳ ಉತ್ಸವ.ಮಕ್ಕಳು ವಿಧ್ಯಾರ್ಥಿಗಳು ತಾನು ಶಿಕ್ಷಣ ಪಡೆದ ಗುರುಗಳ ಅಪ್ಪಣೆ ಪಡೆದು ತಂದೆ ತಾಯಿಗಳಿಗೆ,ಪ್ರೇಕ್ಷಕ ವರ್ಗಕ್ಕೆ ನೇತ್ರಾನಂದ ಮಾಡಲು ಈ ಕಲೆಗಳ ಉತ್ಸವವನ್ನು ಏರ್ಪಡಿಸ ಆಗಿತ್ತು.
ಆಯೋಜಕರಾದ ನಾಗೇಂದ್ರ ಹಾಗು ಡಾ ರಾಘಶ್ರೀ ರವರು ನೃತ್ಯ ಕಲಾವಿದರ ಆಸಕ್ತಿಗೆ ಅನುಸಾರವಾಗಿ ಅವರ ಕಲಾಪ್ರದರ್ಶನಕ್ಕೆ ಅನುವು ಮಾಡಿಕೊಡಲು ವೇದಿಕೆಯನ್ನು ಕಲ್ಪಿಸುವುದು ಪ್ರಧಾನ ಉದ್ದೇಶ ವಾಗಿತ್ತು.ಪ್ರತಿ ದಿನ ಯಾಂತ್ರಿಕ ಜೀವನ ನಡಿಸುವ ನಗರವಾಸಿಗಳಿಗೆ ಕೊಂಚ ಮಾನಸಿಕ ವಿಶ್ರಾಂತಿಗಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತ ಎಂದು ಹೇಳ ಲಾಗುತ್ತಿದೆ.
ಇಂತಹ ಕಾರ್ಯಕ್ರಮಗಳನ್ನು ಉತ್ತೇಜಿಸಿ ನಮ್ಮ ಶಾಸ್ತ್ರೀಯ ಕಲೆಗಳನ್ನು ಉಳಿಸಲು ಮುಂದಿನ ಪೀಳಿಗೆಗೆ ಹಸ್ತಾಂತ ರಿಸಲು ಹೆಚ್ಚು ಆಸಕ್ತಿ ವಹಿಸಿದ ಹಾಸ್ಯ ಹಾಗು ಮನೆಮಂದಿ ಎಲ್ಲಾ ಕೂತು ನೋಡಬಹುದಾದ ಮಿಸ್ಟರ್ ರಾಣಿ ಚಲನ ಚಿತ್ರ ತಂಡದವರು ಕಾರ್ಯಕ್ರಮದ ಆಯೋ ಜಕರಾಗಿದ್ದು ಇಂತಹವರಿಂದ ನಮ್ಮ ಹಿರಿಯರು ಬಳುವಳಿಯಾಗಿ ನೀಡಿದ ನಮ್ಮ ಸಾಂಪ್ರದಾಯ ಕಲೆಗಳನ್ನು ಉಳಿಸಿ ಪ್ರೇಕ್ಷಕ ವರ್ಗಕ್ಕೆ ನೀಡಲು ಮಾಡಿದ ಪ್ರಯತ್ನ ಮಚ್ಚು ವಂತದ್ದು.ಕಲಾಪೋಷಕರಾದ ಪ್ರೆಕ್ಷಕ ವರ್ಗ ಇತಹ ಕಲೆಗಳನ್ನು ಉತ್ತೇಜಿಸ ಬೇಕಾದ ಆವಶ್ಯಕತೆ ಇದೆ.ಇಂತಹ ಉತ್ತಮ ಮನೋಭಾವ ವಿರುವ ಕಲಾವಿದರಿಂದಲೇ ಇಂದಿಗೂ ನಮ್ಮ ಭರತ ಭೂಮಿಯಲ್ಲಿ ಕಲೆಗಳು ರಾರಾಜಿಸುತ್ತಿದೆ.ಕಲೆಯನ್ನು ಆಶ್ವಾದಿಸುವ ಮನೋಭಾವನೆ ಇರುವ ವರಿಗೂ ನಮ್ಮ ಸಾಂಪ್ರದಾಯ ಕಲೆ ಜೀವಂತವಾಗಿರುತ್ತೆ.
ಯಾಂತ್ರಿಕ ಜೀವನದ ನಗರವಾಸಿಗಳಿಗೆ ಕೊಂಚ ಮಾನಸಿಕ ನೆಮ್ಮದಿ ಉಂಟು ಮಾಡಲು ಇಂತಹ ಕಾರ್ಯಕ್ರಮಗಳ ಆಯೋಜನೆ ಮುಖ್ಯ ಎಂದು ಹೇಳ ಲಾಗುತ್ತಿದೆ. ಪ್ರಮು ಖವಾಗಿ ನಗರದಲ್ಲಿನ ಸಾವಿರಾರು ನೃತ್ಯ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿಧ್ಯಾರ್ಥಿಗಳಿಗೆ ಇಂಹ ಆಯೋಜಕರ ಆಸರೇ ಬೇಕಾಗಿದೆ,ಇಂತಹ ಕಲೆಗಳು ವಿಸ್ತಾರ ವಾಗಲು ಕೇವಲ ನೃತ್ಯ ಶಾಲೆಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ.ಸಮಾನ ಮನಸ್ಕರ ಮನೋಭಾವನೆ ಯಲ್ಲಿ ಇಂತಹ ಅಲೋಚನೆ ಬರಬೇಕಾಗಿದೆ.
ವೇದಿಕೆಯ ಮೇಲಿನ ಪುಠಾಣಿಗಳ ಗಜ್ಜೆ ನಾದಗಳ ವಿನ್ಯಾಸ,ವಿನ್ಯಾಸಕ್ಕೆ ತಕ್ಕಂತೆ ಸಂಗೀತ, ಮಹಾಮಹರು ಬರದಂತಹ ಕೀರ್ತನೆಗಳು ಕೇಳುವ ನೋಡುವ ಸೌಭಾಗ್ಯ ಪ್ರೇಕ್ಷವರ್ಗದವರಿಗೆ ಒದಿಸಿತ್ತು ಕಲೆಗಳ ಉತ್ಸವ ತಂಡ. ತಮ್ಮ ಮಕ್ಕಳಿಗೆ ಶಾಸ್ತ್ರೀಯ ನೃತ್ಯಗಳಲ್ಲಿ ಶಿಕ್ಷಣ ಕೊಡಿಸುವ ಮೂಲಕ ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ನೀಡಿದ ಕಲಾ ಸಂಪತ್ತನ್ನು ಉಳಸಿ ಬೆಳಸ ಬೇಕೆಂದು ನಟಿ,ನೃತ್ಯ ಕಲಾವಿದೆ ಹಾಗೂ ಶೆಲ್ಯೂಷಂ ಅರ್ಟ್ಸ್ಸಂಸ್ಥೆಯ ಶ್ರೀಮತಿ ಚೈತ್ರ ಅನಂತ ವಿಕ್ರಮ್ ತಿಳಿಸಿದರು.
ಇವರು ಶನಿವಾರ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿನ ಆಡಿಟೋರಿಯಮ್ ನಲ್ಲಿ ನಾಗೇಂದ್ರ ಶಿವರಾಜೇಗೌಡ,ಡಾ ರಾಘಶ್ರೀ ನೇತೃತ್ವದಲ್ಲಿ ನಡೆದ ಕಲೆಗಳ ಉತ್ಸವ ಕರ್ಯಕ್ರಮದಲ್ಲಿ ನೃತ್ಯ ಕಲೆಗಳನ್ನು ಪ್ರಾರಂಭಿಸಿ ಮಾತನಾಡಿದರು.ಕಲೆ ನಿರಂತರ ಅಭ್ಯಾಸದಿಂದ ಕರಗತ ಮಾಡಿಕೊಳ್ಳಲು ಸಾದ್ಯ.ಭಾರತೀಯ ನೃತ್ಯಗಳನ್ನು ಅಭ್ಯಾಸ ಮಾಡಿ ಪ್ರದರ್ಶಿಸುವುದು ಬಹಳ ಮುಖ್ಯ ಎಂದರು.ಈ ನಿಟ್ಟಿನಲ್ಲಿ ರಾಘಶ್ರೀ ಮಾಡುತ್ತಿರುವ ಕಲಾ ಪ್ರದರ್ಶನ ಶ್ಲಾಘನೀಯ ಎಂದರು.
ಮತ್ತೋರ್ವ ಅತಿಥಿ ಗುರು ನಮಿತಾ ದೇಶಾಯಿ ಮಾತನಾಡಿ ನಮ್ಮ ಸಾಂಪ್ರದಾಯಿಕ ನೃತ್ಯಗಳ ಕಲೆಯನ್ನು ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕು ಎಂದರು.ನಮ್ಮ ಸಾಂಪ್ರದಾಯ ನೃತ್ಯಗಳ ಬಗ್ಗೆ ತಿಳಿಸಿದರು. ವಿವಿಧ ನೃತ್ಯ ಶಾಲೆಯ ಮಕ್ಕಳು ಭರತನಾಟ್ಯ, ಕೂಚಿಪೂಡಿ, ಒಡೆಸ್ಸೀ, ಕಥಕ್ ನೃತ್ಯಗಳನ್ನು ಪ್ರದರ್ಶಿಸಿದರು.
ವೇದಿಕೆಯ ಮೇಲೆ ಹಿರಿಯ ಪತ್ರಕರ್ತರಾದ ಲೇಪಾಕ್ಷಿ ಸಂತೋಷರಾವ್,ಗುರು ಶಮಾಕೃಷ್ಣ, ಮಿಸ್ಟರ್ ರಾಣಿ ಚಲನ ಚಿತ್ರ ತಂಡದ ನಟ ದೀಪಕ್ ಸುಬ್ರಹ್ಮಣ್ಯ,ನಿರ್ದೇಶಕ ಮಧುಚಂದ್ರ, ಮುಂತಾದವರು ಆಸೀನರಾಗಿದ್ದರು.