ಚಿಕ್ಕಬಳ್ಳಾಪುರ: ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ಮದರ್ ತೆರೇಸಾ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ನಡೆಯುತ್ತಿರುವ “ಮಕ್ಕಳ ಆಸರೆ” ಆಶ್ರಮದಲ್ಲಿ 2024 ರ ಸಾಲಿನ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮದರ್ ತೆರೇಸಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ನಿರ್ಮಲಮೇರಿ ಎಸ್ ರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಿ. ಬಿ. ರಸ್ತೆಯಲ್ಲಿರುವ ಸೆಂಟ್ ಜ್ಜೇವಿಯರ್ ಚರ್ಚ್ ನ ಫಾದರ್ ಸನ್ಮಾನ್ಯ ಶ್ರೀ ರೆವೆರೆಂಡ್ ಅಲ್ಬೇನ್ ಝೀಯೋ ರವರು ಪ್ರಾರ್ಥಿಸಿ ಆಶೀರ್ವದಿಸಿದರು ಮತ್ತು ಮಕ್ಕಳಿಗೆ ಉಪಯುಕ್ತ ಹಿತವಚನಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಡಾಕ್ಟರ್ ಎಂ. ಡಿ. ಭಾಷಾ ರವರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಭೆಯಲ್ಲಿ ರಿ. ಆರಕ್ಷಕ ಉಪನಿರೀಕ್ಷಕರು ಆದ ಶ್ರೀಯುತ ನಂಜುಂಡಯ್ಯರವರು, ಜನಶ್ರೀ ಬ್ಯಾಂಕ್ನ ಗುರುಮೂರ್ತಿರವರು ಟ್ರಸ್ಟಿನ ಉಪಾಧ್ಯಕ್ಷರು ಆದ ಕೆ. ಜೆ. ಮುನಿರಾಜು ರವರು
ಖಜಾಂಚಿಗಳಾದ ಅರುಣ್ ಸುಷ್ಮಾ ರವರು ಸದಸ್ಯರುಗಳಾದ ಶ್ರೀಮತಿ ಶೀಲಾಶ್ರೀನಿವಾಸ್ ಟಿ ಶ್ರೀಮತಿ ಸ್ನೇಹಾಸುನಿಲ್ರವರಿದ್ದರು ಟ್ರಸ್ಟಿನ ಕಾರ್ಯದರ್ಶಿಗಳಾದ ಎಂ. ಹನುಮಂತಪ್ಪ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಸ್ನೇಹಾಸುನಿಲ್ರವರು ಆಯೋಜಿಸಿದರು ಕೆ. ಜೆ. ಮುನಿರಾಜುರವರಿಂದ ಸ್ವಾಗತಿಸಿದರು. ಅರುಣ್ ಸುಷ್ಮಾ ರವರ ವಂದನೆಗಳಿಂದ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು.