ಬೆಂಗಳೂರು: ತನ್ನ ಇಬ್ಬರ ಮಕ್ಕಳನ್ನು ಕೊಂದು ದಂಪತಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬಾಲ ಆಂಜನೇಯ ಟೆಂಪಲ್ ರಸ್ತೆ, ಆರ್ ಎಂ ವಿ ಸೆಕೆಂಡ್ ಸ್ಟೇಜ್ ನಲ್ಲಿ ವಾಸವಿರುವ ಉತ್ತರ ಪ್ರದೇಶದ ಅಲಹಾಬಾದ್ ಮೂಲದವರಾದ ಅನುಪ್ ಕುಮಾರ್ (38), ಈತನ ಪತ್ನಿ ರಾಖಿ(35), ಅಸ್ವಸ್ಥ ಬಾಲಕಿಯಾದ ಅನುಪ್ರಿಯ(5) ಮತ್ತು ಮತ್ತು ಪ್ರಿಯಾ ಅನುಶ್(2) ಎಂಬ ಗಂಡು ಮಗು ಈ ನಾಲ್ಕು ಜನ ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿರುತ್ತಾರೆ.
ಕೇಂದ್ರ ವಿಭಾಗದ ಡಿಸಿಪಿ ಶೇಖರ್ ರವರ ಹೇಳಿಕೆ ಪ್ರಕಾರ ಕಾರಣ ತಿಳಿದು ಬಂದಿರುವುದಿಲ್ಲ, ತನಿಖೆಯ ನಂತರ ತಿಳಿದು ಬರುತ್ತದೆ ಎಂದು ತಿಳಿಸಿರುತ್ತಾರೆ.ಮೊದಲನೇ ವರ್ತಮಾನದ ಪ್ರಕಾರ ಮಕ್ಕಳಿಗೆ ವಿಷ ಉಣಿಸಿ ಗಂಡ ಹೆಂಡತಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಆನ್ಲೈನ್ ಬಿಸಿನೆಸ್ ಮಾಡುತ್ತಿದ್ದರು ಎಂದು ಅಕ್ಕಪಕ್ಕದವರು ತಿಳಿಸಿರುತ್ತಾರೆ ಆದರೂ ತಕ್ಷಣಕ್ಕೆ ಸರಿಯಾದ ಮಾಹಿತಿ ಇಲ್ಲದಿರುವ ಕಾರಣ ತನಿಕೆಯ ನಂತರ ಮತ್ತು ಅವರ ಸಂಬಂಧಿಗಳ ವಿಚಾರಣೆ ನಂತರ ತಿಳಿದು ಬರುತ್ತದೆ ಎಂದು ತಿಳಿಸಿದ್ದಾರೆ.