ರಾಮನಗರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿ ತಾಯಿಯೇ ಕೊಲೆ ಮಾಡಿ ಹೂತಿದ್ದ ಮಕ್ಕಳ ಮೃತದೇಹ ಹೊರ ತೆಗೆದು ಸೋಮವಾರ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಪೊಲೀಸರು ಆರೋಪಿಗಳಾದ ಸ್ವೀಟಿ ಹಾಗೂ ಗ್ರೆಗೋರಿ ಫ್ರಾನ್ಸಿಸ್ ಅವರನ್ನು ಮಕ್ಕಳನ್ನು ಹೂತಿದ್ದ ಹಿಂದೂ ರುದ್ರಭೂಮಿಗೆ ಕರೆ ತಂದರು.ತಹಸೀಲ್ದಾರ್ ತೇಜಸ್ವಿನಿ ಹಾಗೂ ವೃತ್ತ ನಿರೀಕ್ಷಕ ಕೃಷ್ಣರವರ ಸಮಕ್ಷಮದಲ್ಲಿ ಆರೋಪಿಗಳು ತೋರಿಸಿದ ಸ್ಥಳದಲ್ಲಿ ಅಗೆದು ಕಬೀಲ ಮತ್ತು ಕಬಿಲನ್ ಮೃತದೇಹಗಳನ್ನು ಹೊರ ತೆಗೆದು ಮಹಜರು ನಡೆಸಲಾಯಿತು.
ಆನಂತರ ಎರಡು ಮೃತ ದೇಹಗಳ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಮಕ್ಕಳ ತಂದೆ ಶಿವುರವರು ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಮೃತ ದೇಹಗಳನ್ನು ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋದರು.