ಕಲಬುರಗಿ: ಮಕ್ಕಳ ಮೇಲೆ ಪತಿ ದೌರ್ಜನ್ಯ ಎಸಗುತ್ತಿದ್ದು, ಹಲ್ಲೆ ನಡೆಸುತ್ತಿದ್ದಾರೆಂದು ಆರೋಪಿಸಿ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸರು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್ಸ್ಟೇಬಲ್ ತಾರಾಸಿಂಗ್ ರಾಠೋಡ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇಬ್ಬರು ಗಂಡು ಮಕ್ಕಳ ಮೇಲೆ ಪತಿ ದೌರ್ಜನ್ಯ ಎಸಗುತ್ತಿದ್ದು, ಲೈಂಗಿಕವಾಗಿ ನಿಂದಿಸುತ್ತಿದ್ದಾರೆ. ನಮ್ಮ ನಡುವೆ ಇರಬೇಕಿದ್ದ ಖಾಸಗಿತನವನ್ನು ಮಕ್ಕಳೂ ನೋಡುವಂತೆ ಒತ್ತಾಯಿಸುತ್ತಾರೆ. ಮಕ್ಕಳಿಗೆ ಬೆಲ್ಟ್ ನಲ್ಲಿ ಹೊಡೆಯುತ್ತಿದ್ದು, ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಮನೆಯಲ್ಲಿ ಅಸುರಕ್ಷಿತ ಹಾಗೂ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಪತಿಯ ವರ್ತನೆ ತೀವ್ರ ಆಘಾತವನ್ನುಂಟು ಮಾಡಿದೆ. ಹಿರಿಯ ಪುತ್ರನಿಗೆ ಶಾಲೆಗೆ ಹೋಗಲು ಬಿಡುತ್ತಿಲ್ಲ. ಇದೀಗ ಆತ ಶಿಕ್ಷಣದಿಂದ ವಂಚಿತವಾಗಿದ್ದೇನೆ. ಹೀಗಾಗಿ ಪತಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ನನಗೆ ಹಾಗೂ ಮಕ್ಕಳಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.