ನೆಲಮಂಗಲ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ತುಂಬಾ ಸಹಕಾರಿ.ಅಲ್ಲದೇ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದರಿಂದ ಮಕ್ಕಳ ಆರೋಗ್ಯ, ಸ್ಮರಣಶಕ್ತಿ ಅಭಿವೃದ್ಧಿ ಆಗುವುದರ ಜೊತೆಗೆ ಹೊಸ ಚೈತನ್ಯ ಮೂಡುತ್ತದೆ ಎಂದು ಸಮಾಜ ಸೇವಕರು ಹಾಗೂ ಎಸ್ ಎಲ್ ಜಿ ಕಾಂಪ್ಲೆಕ್ಸ್ ಮಾಲಿಕರಾದ ಶ್ರೀ ವೆಂಕಟೇಗೌಡರು ಮಾತನಾಡಿದರು.
ಮಾದನಾಯಕನಹಳ್ಳಿಯ ಶ್ರೀ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಎಸ್ ಕೆ ಎಸ್ ಇಂಟರ್ನ್ಯಾಷನಲ್ ಪೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಇಂತಹ ವಿಶೇಷ ಕರಾಟೆ ಪಂದ್ಯಾವಳಿಯ ಕಾರ್ಯಕ್ರಮಲ್ಲಿ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಿ ಭಾಗವಹಿಸಲು ಅನುವು ಮಾಡಿಕೊಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಓದಿನ ಜೊತೆಗೆ ಇಂತಹ ವಿಶೇಷ ಸಾಧನೆ ಮಾಡಲು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ ಎಂದು ಹೇಳಬಹುದು ಎಸ್ ಕೆ ಎಸ್ ಇಂಟರ್ನ್ಯಾಷನಲ್ ಪೌಂಡೇಶನ್ ಹಾಗೂ ಬೇರೆ ಬೇರೆ ಶಾಲೆಯ ಸಂಯೋಜನೆಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮ ನಿಜಕ್ಕೂ ಅದ್ಭುತ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂಬುದು ನಮ್ಮ ಆಶಯ ಎಂದರು.
ಅದೇ ರೀತಿಯಾಗಿ ಮಾದನಾಯಕನಹಳ್ಳಿಯ ಪೋಲಿಸ್ ಇಲಾಖೆಯ ಅಧಿಕಾರಿಗಳಾದ ಎಂ ಕುಮಾರ್ ಅವರು ಮಾತನಾಡಿ ನಿಜಕ್ಕೂ ಈ ಕರಾಟೆ ಪಂದ್ಯಾವಳಿಯ ಕಾರ್ಯಕ್ರಮ ತುಂಬಾ ವಿಶೇಷವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಕರಾಟೆ ತುಂಬಾ ಸಹಕಾರಿ ಮಕ್ಕಳು ತಮ್ಮ ರಕ್ಷಣೆಗಾಗಿ ಈ ಕರಾಟೆಯ ಸದುಪಯೋಗ ಮಾಡಿಕೊಂಡರೆ ತಮ್ಮ ರಕ್ಷಣೆಯ ಜೊತೆಗೆ ಬೇರೊಬ್ಬರು ಅಪಾಯದಲ್ಲಿ ಇದ್ದಾಗ ರಕ್ಷಣೆ ಮಾಡಬಹುದು. ಇಂದಿನ ಕಾಲಮಾನದಲ್ಲಿ ಇಂತಹ ಕ್ರೀಡೆಗಳು ಅತೀ ಅವಶ್ಯಕ ಅದು ಅಲ್ಲದೇ ಕರಾಟೆ ಹೆಣ್ಣು ಮಕ್ಕಳಿಗೂ ಕೂಡ ತುಂಬಾ ಉಪಯೋಗ. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಅತೀವ ಆನಂದ ನೀಡಿದೆ ಎಂದರು.
ಆಯೋಜಕರು ಎಲ್ಲರಿಗೂ ಧನ್ಯವಾದಗಳು. ಕಾರ್ಯಕ್ರಮದ ಸಂಘಟಕರು ಹಾಗೂ ಎಸ್ ಕೆ ಎಸ್ ಇಂಟರ್ನ್ಯಾಷನಲ್ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಶಿವಕುಮಾರ ಸ್ವಾಮಿಯವರು ಮಾತನಾಡಿ ನಿಜಕ್ಕೂ ಇಂದಿನ ಕಾರ್ಯಕ್ರಮದಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಂದ ಮಕ್ಕಳು ಆಗಮಿಸಿ ಈ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದು ತುಂಬಾ ಸಂತೋಷ ನೀಡಿದೆ. ಅಲ್ಲದೇ ಶಿಕ್ಷಕರು ಪೋಷಕರು ಭಾಗವಹಿಸಿ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ನೀಡಿ ನಮಗೂ ಹೆಚ್ಚಿನ ಸಹಕಾರ ನೀಡಿ, ಇಂದಿನ ಪಂದ್ಯಾವಳಿಯ ಕಾರ್ಯಕ್ರಮ ಯಶಸ್ವಿ ಮಾಡಿರುವುದು, ಸಂತೋಷ ಮತ್ತು ಹೆಮ್ಮೆ ಅನಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳೂ ಪಂದ್ಯಾವಳಿಯಲ್ಲಿ ವಿಜೇತರಾಗಿ ಬಹುಮಾನ ನೀಡಲಾಯಿತು.ಪೋಷಕರು ಕೂಡ ವಿಶೇಷವಾಗಿ ಭಾಗವಹಿಸಿ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ನೀಡಿ ಸಂತೋಷಪಟ್ಟರು.ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಶ್ರೀ ಡಿ.ಸಿ.ಗಂಗಾಧರೆಗೌಡರು, ಮಾದನಾಯಕನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಜೆ.ಜೆ.ಮೂರ್ತಿ, ಸಮಾಜ ಸೇವಕರಾದ ಶ್ರೀ ಸಿದ್ದೇಶ್,ಶ್ರೀ ಹನುಮಯ್ಯ ಪದಾಧಿಕಾರಿಗಳಾದ ಶ್ರೀ ನಾಗೇಶ್ ಎನ್,ಶಿವಕುಮಾರ್, ರವಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಇನ್ನೂ ಅನೇಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.