ಇಂಫಾಲ್: ಮಣಿಪುರದ ಬಿಷ್ಣುಪುರ್ ಮತ್ತು ತೌಬಲ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಿಷ್ಣುಪುರ್ ಜಿಲ್ಲೆಯ ಥೋಂಗ್ಖೋಂಗ್ಲೋಕ್ ಗ್ರಾಮದಲ್ಲಿ ಭದ್ರತಾ ಪಡೆಗಳು ಮಂಗಳವಾರ ಒಂದು ಎಸ್ಎಲ್ಆರ್ನೊಂದಿಗೆ ಒಂದು ಮ್ಯಾಗಜೀನ್, ಒಂದು 303 ರೈಫಲ್, ಒಂದು 12 ಬೋರ್ ಸಿಂಗಲ್ ಬ್ಯಾರೆಲ್ ಗನ್, ಎರಡು 9 ಎಂಎಂ ಪಿಸ್ತೂಲ್ ಜೊತೆಗೆ ಮ್ಯಾಗಜೀನ್, ಒಂದು ಆಂಟಿ-ರಿಯೆಟ್ ಗನ್, ಎರಡು INSAS LMG ಮ್ಯಾಗಜೀನ್, ಎರಡು INSAS ರೈಫಲ್ಗಳನ್ನು ವಶಪಡಿಸಿಕೊಂಡಿವೆ.
ನಾಲ್ಕು ಕೈ ಗ್ರೆನೇಡ್ಗಳು, ಒಂದು ಡಿಟೋನೇಟರ್, ಐದು ಗಲಭೆ ನಿಗ್ರಹ ಶೆಲ್ ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ಜಪ್ತಿ ಮಾಡಿವೆ.
ಭದ್ರತಾ ಪಡೆಗಳು ತೌಬಲ್ ಜಿಲ್ಲೆಯ ಲೀಶಾಂಗ್ಥೆಮ್ ಐಕಾಪ್ ಪ್ಯಾಟ್ ಪ್ರದೇಶದಲ್ಲಿ ಒಂದು ಆಂಟಿ ಮೆಟೀರಿಯಲ್ ರೈಫಲ್(AMR) ಸ್ನೈಪರ್, ಎರಡು ಸಿಂಗಲ್ ಬೋಲ್ಟ್ ಆಕ್ಷನ್ ರೈಫಲ್, ಮೂರು 9mm ಪಿಸ್ತೂಲ್ ದೇಶ ನಿರ್ಮಿತ), ಒಂದು ಕೈ ಗ್ರೆನೇಡ್, ನಾಲ್ಕು MK-13T ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏತನ್ಮಧ್ಯೆ, ಇಂಫಾಲ್ ಪೂರ್ವ ಜಿಲ್ಲೆಯ ಬೆಂಗಾಲಿ ಕ್ರಾಸಿಂಗ್ ಬಳಿಯ ಮಂತ್ರಿಪುಖ್ರಿ ಬಜಾರ್ನಲ್ಲಿ ಸುಲಿಗೆಯಲ್ಲಿ ತೊಡಗಿದ್ದ ನಿಷೇಧಿತ ಸಂಘಟನೆ ಕಾಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ(ಪೀಪಲ್ಸ್ ವಾರ್ ಗ್ರೂಪ್) ಸದಸ್ಯನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಮತ್ತು ಆತನ ಬಳಿ ಇದ್ದ ಒಂದು 9 ಎಂಎಂ ಪಿಸ್ತೂಲ್, ಮ್ಯಾಗಜೀನ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.