ಬೆಳಗಾವಿ: ಮಣಿಪುರದಲ್ಲಿ ಸಂಭವಿಸಿದ ಸೇನಾವಾಹನ ಅಪಘಾತದಲ್ಲಿ ಬೆಳಗಾವಿ ಮೂಲದ ಯೋಧ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮಣಿಪುರದ ಇಂಪಾಲಾ ಜಿಲ್ಲೆಯ ಬೊಂಬಾಲಾ ಪ್ರದೇಶದ ಇಂಪಾಲಾ ಕಣಿವೆಯಲ್ಲಿ ಮಂಗಳವಾರ ಸೇನಾ ವಾಹನ ಉರುಳಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕುಪ್ಪನವಾಡಿ ಗ್ರಾಮದ ಯೋಧ ಧರ್ಮರಾಜ ಸುಭಾಷ ಖೋತ್ (42) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಆರು ಯೋಧರು ಕರ್ತವ್ಯ ಮುಗಿಸಿಕೊಂಡು ವಾಪಸ್ ಕ್ಯಾಂಪ್ ಗೆ ಬರುವಾಗ ಕಣಿವೆ ಬಳಿ ಭೂಮಿ ಕುಸಿದು ವಾಹನ ಕಂದಕಕ್ಕೆ ಉರುಳಿತು. ಗಾಯಗೊಂಡ ಎಲ್ಲ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಧರ್ಮರಾಜ ಖೋತ್ ಅವರು ಅಲ್ಲೇ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.