ದಾವಣಗೆರೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಉಪಚುನಾವಣೆಯ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಸಮಿತಿಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ದಾವಣಗೆರೆಯ ರೈಲು ನಿಲ್ದಾಣದಲ್ಲಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯನ್ನು ಉದ್ಪಾಟಿಸಿ ಮಾತನಾಡಿದರು.
ಉಪಚುನಾವಣೆಯಲ್ಲಿ ಎಲ್ಲಾ ಜನರಿಗೆ ಅರಿವು ಮೂಡಿಸಲು ಈಗಾಗಲೇ ಜಿಲ್ಲಾಡಳಿತ ವಾಕ್ ಥಾನ್, ಬೈಕ್ ರ್ಯಾಲಿ ಸೇರಿದಂತೆ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಇಂದು ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಈ ಸ್ಪರ್ಧೆಯು ಜನರಿಗೆ ಆಕರ್ಷಣೆ ಮಾಡಿದೆ. ಇಲ್ಲಿ ಬಹಳ ಒಳ್ಳೆಯ ಮಾಹಿತಿಯನ್ನು ಕೂಡ ಕೊಟ್ಟಿದ್ದೀರಾ. ‘ನಮ್ಮ ಮತ ನಮ್ಮ ಹಕ್ಕು’, ‘ನಾವು ಕಡ್ಡಾಯವಾಗಿ ಮತ ಚಲಾಯಿಸಬೇಕು’ ಎಂಬ ಘೋಷ ವಾಕ್ಯಗಳನ್ನು ನಮೂದಿಸಿದ್ದಾರೆ ಎಂದು ತಿಳಿಸಿದರು.
ನಾವು ಮತದಾನ ಮಾಡಲು ಮೊದಲು ಮೂರು ಅಂಶಗಳನ್ನು ತಿಳಿದಿರಬೇಕು ಮೊದಲನೆಯದು ನಮ್ಮ ಮತಗಟ್ಟೆ ಕೇಂದ್ರ ಎಲ್ಲಿದೆ ಎಂದು ನೋಡಿಕೊಳ್ಳುವ ಕೆಲಸ. ಎರಡನೆಯದು ಎಲ್ಲಾ ಮತದಾರರು ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿದೆಯಾ ಇಲ್ಲವೋ ಮೊದಲೇ ನೋಡಿಕೊಳ್ಳಬೇಕು. ಮೂರನೇಯದು 10-12 ಅಧಿಕೃತ ಗುರುತಿನ ಚೀಟಿಗಳ ಮಾಹಿತಿಯನ್ನು ತಿಳಿದಿರಬೇಕು ಎಂದರು.
ಅಧಿಕೃತ ಗುರುತಿನ ಚೀಟಿಗಳ ವಿವರ: ಮತಗಟ್ಟೆ ಕೇಂದ್ರದ ಒಳಗೆ ಹೋಗಲು ನಿಮಗೆ ಎಪಿಕ್ ಕಾರ್ಡ್ ಬೇಕಂತೇನಿಲ್ಲ. ಆಧಾರ್ ಕಾರ್ಡ್ ಬ್ಯಾಂಕ್/ಅAಚೆ ಕಚೇರಿ ಪಾಸ್ಬುಕ್ (ಭಾವಚಿತ್ರವಿರುವ) ಪ್ಯಾನ್ ಕಾರ್ಡ್ ಸ್ಮಾರ್ಟ್ ಕಾರ್ಡ್ (ಖಉI ನಿಂದ ನೀಡಲಾದ) ಮನರೇಗಾ ಜಾಬ್ ಕಾರ್ಡ್ ಕೇಂದ್ರ/ರಾಜ್ಯ ಸರ್ಕಾರ ಅಥವಾ ಪಿಎಸ್ಯು/ಲಿಮಿಟೆಡ್ ಕಂಪನಿಯಿAದ ನೀಡಲ್ಪಟ್ಟ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ ಕಾರ್ಮಿಕ ಸಚಿವಾಲಯದ ಯೋಜನೆಯಡಿಯಲ್ಲಿ ವಿತರಿಸಲಾದ ಆರೋಗ್ಯ ವಿಮೆ ಕಾರ್ಡ್ ಚಾಲನಾ ಪರವಾನಗಿ, ಪಾಸ್ಪೋರ್ಟ್ ಕೇಂದ್ರ/ರಾಜ್ಯ ಸರ್ಕಾರದ ಕಚೇರಿಗಳು ನೀಡಿದ ಅಂಗವೈಕಲ್ಯ ಪ್ರಮಾಣಪತ್ರ ಮಾಜಿ ಸೈನಿಕರ ಪಿಂಚಣಿ ಪುಸ್ತಕ ಈ ಎಲ್ಲಾ ದಾಖಲೆಗಳು ಮೂಲ ಪ್ರತಿ ಆಗಿರಬೇಕು.ಫೋಟೋ ಸ್ಪಷ್ಟವಾಗಿ ಕಾಣುತ್ತಿರಬೇಕು.ದಾಖಲೆಗಳಲ್ಲಿ ಹೆಸರು ಮತ್ತು ವಿಳಾಸ ಸರಿಯಾಗಿರಬೇಕು ಮತದಾರರು ಇವುಗಳಲ್ಲಿ ಯಾವುದಾದರೂ ಒಂದು ಅಸಲಿ ದಾಖಲೆಯನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ ಹಾಗೂ ಪ್ರಮುಖವಾಗಿ ಮತಗಟ್ಟೆಯ ಒಳಗೆ ಮೊಬೈಲ್ ಫೋನ್, ಬೆಂಕಿಪೊಟ್ಟಣ ಹಾಗೂ ಚಾಕುಗಳಂತಹ ಮಾರಕ ಆಯುಧಗಳನ್ನು ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದರು.
ಇವಿಎA ಯಂತ್ರಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಇವುಗಳಿಗೆ ಯಾವುದೇ ಹೊರಗಿನ ಇಂಟರ್ನೆಟ್ ಅಥವಾ ನೆಟ್ವರ್ಕ್ ಸಂಪರ್ಕ ಇರುವುದಿಲ್ಲ. ಇವುಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ನಾವೆಲ್ಲ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ಆದಾಗ ಒಳ್ಳೆಯ ಸರ್ಕಾರ ಆಯ್ಕೆ ಮಾಡಲಿಕ್ಕೆ ಇದೊಂದು ನಮಗೆ ಅಧಿಕಾರ ಸಿಕ್ಕಿದೆ. “ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಂದು ಮತವೂ ಅಮೂಲ್ಯ. ಸುಭದ್ರ ಸರ್ಕಾರ ಆಯ್ಕೆ ಮಾಡಲು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು, ಜಿಲ್ಲಾಡಳಿತದ ಈ ಕಾರ್ಯಕ್ಕೆ ಪೂರಕವಾಗಿ ಸಾರ್ವಜನಿಕರು ಚುನಾವಣಾ ರಾಯಭಾರಿಗಳಂತೆ ಕಾರ್ಯನಿರ್ವಹಿಸಿ ಇತರರಿಗೂ ಮಾಹಿತಿ ನೀಡಬೇಕು ಎಂದರು.
ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವೀಪ್ ಅಡಿಯಲ್ಲಿ ಮತದಾರರ ಜಾಗೃತಿ ಕುರಿತು ಹೆಚ್ಚು ಕಾಳಜಿ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ ಅವರು ಮಾತನಾಡಿ, ಮತದಾರರಲ್ಲಿ ಅರಿವು ಮೂಡಿಸಲು ಪ್ರತಿದಿನವೂ ವಿಭಿನ್ನ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ವಾಕಥಾನ್, ಸೈಕಲ್ ರ್ಯಾಲಿ, ಬೈಕ್ ರ್ಯಾಲಿ, ಚುಂಬಾ ಡ್ಯಾನ್ಸ್ ಹಾಗೂ ಕ್ಯಾಂಡಲ್ ಲೈಟ್ ಮೆರವಣಿಗೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ, ಮತದಾರರಿಗೆ ಪೂರಕ ವಾತಾವರಣ ಕಲ್ಪಿಸಲು ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ, ಮಹಿಳಾ ಮತದಾರರನ್ನು ಪ್ರೋತ್ಸಾಹಿಸಲು ಮಹಿಳಾ ಸಿಬ್ಬಂದಿಗಳೇ ನಿರ್ವಹಿಸುವ ಮತಗಟ್ಟೆ, ವಿಕಲಚೇತನರಿಗೆ ಸುಲಭವಾಗಿ ಮತದಾನ ಮಾಡಲು ಬೇಕಾದ ಅಗತ್ಯ ಸೌಲಭ್ಯಗಳಿರುವ ಕೇಂದ್ರ, ಯುವ ಮತಗಟ್ಟೆ: ಮೊದಲ ಬಾರಿಗೆ ಮತದಾನ ಮಾಡುವ ಯುವ ಸಮೂಹಕ್ಕೆ ಸ್ಫೂರ್ತಿ ತುಂಬಲು ‘ಫೀಲ್ ಗುಡ್’ ಪರಿಕಲ್ಪನೆಯಡಿ ಯುವ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ನಡೆಯಲಿರುವ ಉಪಚುನಾವಣೆಯ ಸಂದರ್ಭದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಮತದಾರರಿಗೆ ಅನುಕೂಲ ಮಾಡಿಕೊಡಲು ಜಿಲ್ಲಾಡಳಿತವು ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಮತದಾರರು ಮತದಾನದ ದಿನದಂದು ಮತಗಟ್ಟೆಗಳನ್ನು ಹುಡುಕುವ ಶ್ರಮವನ್ನು ತಪ್ಪಿಸಲು, ಪ್ರತಿಯೊಬ್ಬರ ಮನೆ ಬಾಗಿಲಿಗೆ ಮತಗಟ್ಟೆ ವಿವರಗಳಿರುವ ಚೀಟಿಗಳನ್ನು ತಲುಪಿಸಲು ಜಿಲ್ಲಾಡಳಿತ ಮುಂದಾಗಿದೆ, ಮತದಾರರು ತಮಗೆ ತಲುಪುವ ಈ ಚೀಟಿಗಳ ಮೂಲಕ ತಮ್ಮ ಮತಗಟ್ಟೆ ಕೇಂದ್ರದ ಬಗ್ಗೆ ಮೊದಲೇ ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
ಉಪಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ, ಮುಕ್ತವಾಗಿ ಮತ್ತು ನಿರ್ಭಿತಿಯಿಂದ ಮತ ಚಲಾಯಿಸುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂದರು.
ರಂಗೋಲಿ ಸ್ಪರ್ಧೆಯಲ್ಲಿ ಉಷಾರಾಣಿ ಅವರು ಪ್ರಥಮ ಸ್ಥಾನ, ಚೈತ್ರ ಆಲೂರು ಅವರು ದ್ವಿತೀಯ ಸ್ಥಾನ ಹಾಗೂ ಸುರೇಖಾ ಅವರು ತೃತೀಯ ಸ್ಥಾನವನ್ನು ಪಡೆದರು. ವಿಜೇತರಿಗೆ ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಅಭಿನಂದಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತ ಗೌಡರ್, ಯೋಜನಾ ನಿರ್ದೇಶಕಿ ರೇಷ್ಮಾಬಾನು, ಮಲ್ಲನಾಯಕ್, ತೋಟಗಾರಿಕಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪ ನಿರ್ದೇಶಕ ರಾಜಾನಾಯ್ಕ್ ಜಂಟಿ ನಿರ್ದೇಶಕ ರಾಘವೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್ ಜಿಲ್ಲಾ ಆಯುಷ್ ಅಧಿಕಾರಿ ಯೋಗೇಂದ್ರ, ಡಿಡಿಪಿಯು ಪಳನಿ , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮತದಾನದ ಅರಿವು ಮೂಡಿಸಲು ಜಿಲ್ಲಾಡಳಿತದ ವಿನೂತನ ಕ್ರಮ: ಪಿ.ಎಸ್.ವಸ್ತ್ರದ್



