ವಯಸ್ಸೆನ್ನುವುದು ಒಂದು ನಂಬರ್ ಅಷ್ಟೇ ಸಚಿನ್ ತೆಂಡೂಲ್ಕರ್ ಅವರು ಇದೀಗ ಬ್ಯಾಟಿಂಗ್ ನೋಡಿದ ಯಾರೇ ಆದರೂ ಈ ಮಾತನ್ನು ಹೇಳಬಲ್ಲರು. 51ರ ಹರೆಯದಲ್ಲೂ ಅವರು ಇದೀಗ ಕ್ರಿಕೆಟ್ ತಾಲೀಮು ನಡೆಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.
ಹೌದು ಇಂಡಿಯನ್ಸ್ ಮಾಸ್ಟರ್ಸ್ ಲೀಗ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಸಚಿನ್ ತೆಂಡೂಲ್ಕರ್ ಈಗಾಗಲೇ ನೆಟ್ ಪ್ರ್ಯಾಕ್ಟೀಸ್ ಶುರು ಮಾಡಿಕೊಂಡಿದ್ದಾರೆ. ಅದರ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಎಲ್ಲವೂ ಪರ್ಫೆಕ್ಟ್ ಶಾಟ್ಸ್: ಈ ವಿಡಿಯೋವನ್ನು ನೋಡಿದರೆ ಅದೇ ಹಳೇ ಸಚಿನ್! ಹನ್ನೆರಡು ವರ್ಷಗಳ ಬಳಿಕವೂ ಅವರ ಬ್ಯಾಟಿಂಗ್ ನಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ.ಬ್ಯಾಕ್ ಫುಟ್ ಪುಶ್, ಜ್ಯಾಬ್, ಫ್ಲಿಕ್, ಕಟ್ ಎಲ್ಲವೂ ಪರ್ಫೆಕ್ಟ್! ಆ ಪಾದಚಲನೆಯನ್ನು ನೋಡಿ. ಒಂಚೂರು ದೋಷವಿಲ್ಲ. ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ಅಂದಿಗೂ, ಇಂದಿಗೂ, ಎಂದೆಂದಿಗೂ ಸುಂದರ ದೃಶ್ಯ ಕಾವ್ಯ ಎಂದು ನೆಟ್ಟಿಗರೊಬ್ಬರು ಬಣ್ಣಿಸಿದ್ದಾರೆ.