ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ ಎನ್ನಲಾಗಿದೆ.ಕಳೆದ ಸೋಮವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಐಸಿಸಿ ಪದಾಧಿಕಾರಿಯಾಗಿರುವ ರಾಜ್ಯಕ್ಕೆ ಭೇಟಿ ನೀಡಿದ್ದ ರಣದೀಪ್ಸಿಂಗ್ ಸುರ್ಜೆವಾಲ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕವಾಗಿ ಸಮಾಲೋಚನೆ ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಸಿದ್ದರಾಮಯ್ಯನವರು, ನಾನು ಕ್ಯಾಬಿನೆಟ್ಗೆ ಮುಖ್ಯಸ್ಥ. ಡಿಸಿಎಂ ಹುದ್ದೆ ಹೆಚ್ಚುವರಿಯಾಗಿ ಸೃಷ್ಠಿಸುವುದು, ಸಂಪುಟ ಪುನಾರಚನೆ ಮಾಡುವುದು ನನ್ನ ಪರಮಾಧಿಕಾರ. ಹೀಗಾಗಿ, ನಾನು ಹೆಚ್ಚುವರಿಯಾಗಿ ಡಿಸಿಎಂ ಹುದ್ದೆ ಸೃಷ್ಠಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಸಿದ್ಧರಾಮಯ್ಯರ ಮಾತಿಗೆ ಸುರ್ಜೇವಾಲಾ, ಡಿಕೆ ಶಿವಕುಮಾರ್ ಆಶ್ಚರ್ಯಚಕಿತರಾಗಿದ್ದಾರೆ.
ಈ ಹಂತದಲ್ಲಿ ಸದ್ಯಕ್ಕೆ ಏನು ಮಾಡುವುದು ಬೇಡ. ಬಜೆಟ್ ಅಧಿವೇಶನ ಮುಕ್ತಾಯವಾಗಲಿ. ಬಳಿಕ ನೋಡೋಣ, ಮಾತನ್ನಾಡೋಣ ಎಂದು ಸುರ್ಜೇವಾಲಾ ಸಮಾಧಾನಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡೂವರೆ ಘಂಟೆಗಳ ಕಾಲ ಕ್ಲೋಸ್ ಡೋರ್ ಮೀಟಿಂಗ್ನಲ್ಲಿ ಮನಸ್ಸು ಬಿಚ್ಚಿ ಮಾತನ್ನಾಡಿ, ಪರಮಾಧಿಕಾರದ ಪ್ರಸ್ತಾಪ ಮಾಡಿ ಹೈಕಮಾಂಡ್ ನಾಯಕರಿಗೆ ಸಿಎಂ ಸಿದ್ಧರಾಮಯ್ಯ ಶಾಕ್ ಕೊಟ್ಟಿದ್ದಾರೆ.ಕಳೆದೆರಡು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸಭೆಯ ಬಳಿಕ ಮೂವರ ಮಧ್ಯೆ ಎರಡುವರೆ ಘಂಟೆಗಳಕಾಲ ರಹಸ್ಯ ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ.