ಬೆಂಗಳೂರು: ರಾಜ್ಯದಲ್ಲಿ ಬಿಯರ್ ಬೆಲೆ ೧೦ ರಿಂದ ೨೦ ರೂಪಾಯಿ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿ ಕಳೆದ ೧೭ ತಿಂಗಳಲ್ಲಿ ೫ನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾಗಿದೆ. ಕಂಪನಿಗಳು ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ದರ ಏರಿಸಿದ್ದವು. ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಮತ್ತೆ ದರ ಏರಿಕೆ ಮಾಡಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಯರ್ ದರ ೫೦ರಿಂದ ೬೦ ರೂ.ವರೆಗೆ ಏರಿಕೆಯಾಗಿದೆ.
ಸರ್ಕಾರ ಈ ಹಿಂದೆ ಬಿಯರ್ ಮೇಲೆ ಶೇ.೨೦ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು.
ಆ ನಂತರ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಿಯರ್ ಕಂಪನಿಗಳು ಫೆಬ್ರವರಿ ತಿಂಗಳಲ್ಲಿ ಬಿಯರ್ ಬೆಲೆ ೧೦ ರೂ.ವರೆಗೆ ಏರಿಕೆ ಮಾಡಿತ್ತು. ಈಗ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಬಿಯರ್ ದರ ಏರಿಕೆ ಮಾಡಿವೆ. ಈ ಮೂಲಕ ೧೫ ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು ೫೦ ರಿಂದ ೬೦ ರೂ. ವರೆಗೆ ಹೆಚ್ಚಳವಾದಂತಾಗಿದೆ.