ಕಳೆದ ಐಪಿಎಲ್ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಯಾರಿಗೂ ಮಾರಾಟವಾಗದೇ ಉಳಿದಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಅವರನ್ನು ಖರೀದಿಸಿದೆ.
ಸೌದಿ ರೇಬಿಯಾದ ಜೆದ್ದಾಹ್ ನಲ್ಲಿ ಭಾನುವಾರ ಪ್ರಾರಂಭವಾಗಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸೋಮವಾರದಂದು ಅರ್ಜುನ್ ತೆಂಡೂಲ್ಕರ್ ಹೆಸರನ್ನು ಪ್ರಸ್ತಾಪಿಸಲಾಯಿತು.
ಅವರಿಗೆ ಅತಿ ಕಡಿಮೆ 30 ಲಕ್ಷ ರೂಪಾಯಿ ಮೂಲಧನ ನಿಗದಿಯಾಗಿತ್ತು. ಹರಾಜಿನಲ್ಲಿ ಯಾವ ತಂಡವೂ ಖರೀದಿಸಲು ಆಸಕ್ತಿ ತೋರಲಿಲ್ಲ. ಮುಂಬೈ ಇಂಡಿಯನ್ಸ್ ಸಹ ಬಿಡ್ ಸಲ್ಲಿಸಲಿಲ್ಲ. ಹೀಗಾಗಿ ಅವರು ಅನ್ ಸೋಲ್ಡ್ ಆಗಿ ಉಳಿದಿದ್ದರು. ಈಗ ಮುಂಬೈ ಅವರನ್ನು ಮೂಲಬೆಲೆ 30 ಲಕ್ಷ ರೂಪಾಯಿ ತೆತ್ತು ತಂಡಕ್ಕೆ ಸೇರಿಸಿಕೊಂಡಿದೆ.