ಬೆಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಆಹಾರೋ ತ್ಪನ್ನ ಬ್ರ್ಯಾಂಡ್ ಮದರ್ಸ್ ರೆಸಿಪಿ ಕರ್ನಾಟಕದಲ್ಲಿ ಪುಳಿಯೋಗರೆ ಸ್ಪೈಸ್ ಮಿಕ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ಇನ್ ಸ್ಟಾಂಟ್ ಮಿಕ್ಸ್ ಉತ್ಪನ್ನ ವಿಭಾಗವನ್ನು ವಿಸ್ತರಿಸಿಕೊಂಡಿದೆ.
ಪುಳಿಯೋಗರೆ ಕರ್ನಾಟಕ ಭಾಗದ ಪ್ರಸಿದ್ಧ ಆಹಾರವಾಗಿದ್ದು, ಕರ್ನಾಟಕದ ಅಡುಗೆ ಮನೆಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದೀಗ ಮದರ್ ರೆಸಿಪಿಯು ತನ್ನ ಇನ್ ಸ್ಟಾಂಟ್ಪುಳಿಯೋಗರೆ ಮಿಕ್ಸ್ ಮೂಲಕ ಪುಳಿಯೋಗರೆ ತಯಾರಿಯನ್ನು ಮತ್ತಷ್ಟು ಸುಲಭ ಮಾಡಿದೆ.ಪುಳಿಯೋಗರೆ ಸ್ಪೈಸ್ ಮಿಕ್ಸ್ ಉತ್ಪನ್ನದ ಮೂಲಕ ಗ್ರಾಹಕರು ಅಧಿಕೃತ,ಸಾಂಪ್ರದಾಯಿಕ ಪುಳಿಯೋಗರೆ ಫ್ಲೇವರ್ ಅನ್ನು ಆಸ್ವಾದಿಸಬಹುದು. ಜಾಸ್ತಿ ಸಮಯ ಅಡುಗೆ ಮನೆಯಲ್ಲಿ ಕಳೆಯದೆ ವೇಗವಾಗಿ ಅತ್ಯಂತ ಜನಪ್ರಿಯ ಆಹಾರವನ್ನು ಸವಿಯಬಹುದು.
ಕುಟುಂಬಕ್ಕೆ ಮಾಡುವ ರೆಗ್ಯುಲರ್ಅಡುಗೆಯೇ ಆಗಲಿ, ಹಬ್ಬದ ಅಡುಗೆಯೇ ಆಗಲೀ ಯಾವುದೇ ಸಂದರ್ಭಕ್ಕೆ ತಕ್ಕುದಾದ ರುಚಿಕರ ಆಹಾರವನ್ನು ಕೆಲವೇ ನಿಮಿಷಗಳಲ್ಲಿ ಸಿದ್ಧಗೊಳಿಸುವ ಅವಕಾಶವನ್ನು ಮದರ್ಸ್ ರೆಸಿಪಿ ಕೊಟ್ಟಿದೆ.ಮದರ್ಸ್ ರೆಸಿಪಿಯ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಸಂಜನಾ ದೇಸಾಯಿ ಅವರು, “ನಮ್ಮ ಇನ್ ಸ್ಟಾಂಟ್ ಮಿಕ್ಸ್ ಉತ್ಪನ್ನ ಶ್ರೇಣಿಗೆ
ಪುಲಿಯೋಗರೆ ಸ್ಪೈಸ್ ಮಿಕ್ಸ್ ಉತ್ಪನ್ನವನ್ನು ಸೇರಿಸಲು ನಾವು ಸಂತೋಷ ಹೊಂದಿದ್ದೇವೆ. ಪುಳಿಯೋಗರೆ ಕರ್ನಾಟಕದ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ ಮತ್ತು ನಮ್ಮ ಈ ಉತ್ಪನ್ನವು ಕುಟುಂಬಗಳಿಗೆ ವಿಶಿಷ್ಟ ಫ್ಲೇವರ್ ನ ರುಚಿಕರ ಆಹಾರವನ್ನು ಕಡಿಮೆ ಶ್ರಮ ಬಳಸಿ ತಯಾರಿಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು.