ಬೆಂಗಳೂರು: ಕಳೆದ ವಾರ ಬೆಂಗಳೂರು ನಗರ ಸಂಚಾರಿ ಪೊಲೀಸರು 43751 ವಿವಿಧ ಬಗೆಯ ವಾಹನಗಳ ಚಾಲಕರುಗಳನ್ನು ತಪಾಸಣೆ ನಡೆಸಿ ದಾಗ 551 ಚಾಲಕರುಗಳು ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿದ್ದರು.
ಈ 551 ವಾಹನಗಳನ್ನು ಮುಟ್ಟುಗೊಲು ಹಾಕಿಕೊಂಡು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಚಾಲುಕರುಗಳಿಗೆ ದಂಡ ವಿಧಿಸಲು ಸಲ್ಲಿಸಿರುತ್ತಾರೆ. ಅತಿ ವೇಗವಾಗಿ ವಾಹನಗಳನ್ನು ಚಲಾವಣೆ ಮಾಡುತ್ತಿದ್ದ ಚಾಲಕರುಗಳ ವಿರುದ್ಧ 176 ಪ್ರಕರಣಗಳನ್ನು ದಾಖಲಿಸಿಕೊಂಡು ರೂ. 1,76,000 ದಂಡವನ್ನು ವಸೂಲಿ ಮಾಡಿರುತ್ತಾರೆ.