ಮಧುಗಿರಿ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಮುತು ವರ್ಜಿಯಿಂದ ಹಲವಾರು ದಶಕ ಗಳಿಂದ ಬೇಡಿಕೆಯಲ್ಲಿದ್ದ ಬೆಸ್ಕಾಂ ಇಲಾಖೆಯ ನೂತನ ಸ್ವಂತ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಹೇಳಿದರು.
ಪಟ್ಟಣದ ಕೆ.ಪಿ.ಟಿ.ಸಿ.ಎಲ್ ಅವರಣದಲ್ಲಿ ನೂತನ ಬೆಸ್ಕಾಂ ಕಚೇರಿ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ, ಕೃಷಿ ಇಲಾಖೆಯಿಂದನೂರಾರು ರೈತರಿಗೆ ಕೃಷಿ ಯಂತ್ರೋಪಕರಣಗಳು ಹಾಗೂ ನೀರಾವರಿ ಸಲಕರಣೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಬೆಸ್ಕಾಂ ಇಲಾಖೆಗೆ ಇಲ್ಲಿಯವರೆಗೂ ಸ್ವಂತ ಕಟ್ಟಡವಿರಲಿಲ್ಲ. ಕೆ.ಎನ್.ರಾಜಣ್ಣನವರ ದೂರದೃಷ್ಟಿಯಿಂದಾಗಿ ನುಮಾರು 7.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಕಟ್ಟಡ ನಿರ್ಮಾ ಚಾಲನೆ ನೀಡಲಾಗಿದೆ. ಕ್ಷೇತ್ರದಲ್ಲಿ ಗುಣಮಟ್ಟದ ವಿದ್ಯುತ್ ನೀಡಲು ಈಗಾಗಲೇ ಎರಡು ಕಡೆ ನೂತನ ಸಬ್ ಸ್ಟೇಷನ್ ನಿರ್ಮಾಣ ಮಾಡಲು ಸ್ಥಳ ನಿಗದಿಯಾಗಿದ್ದು, ಶೀಘ್ರವಾಗಿ ಕೆಲಸ ಆರಂಭಗೊಳ್ಳಲಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಗ್ರಹಜ್ಯೋತಿ ಯೋಜನೆಯು ಶೇ.100 ರಷ್ಟು ಫಲಪ್ರದವಾಗಿದ್ದು ಇದಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದೆ ರಾಜೇಂದ್ರ, ಕ್ಷೇತ್ರದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಕೃಷಿಯೇ ಮೂಲ ಆದಾಯವಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಗುಣಮಟ್ಟದ ರಸಗೊಬ್ಬರ, ಬಿತ್ತನೆ ಬೀಜಗಳನ್ನು ವಿತರಿಸಬೇಕು. ವಿತರಣೆಯಲ್ಲಿ ಕಳಪೆ ಆರೋಪ ಕೇಳಿ ಬಂದಲ್ಲಿ ಮುಲಾಜಿಲ್ಲದೆ ತಪಿತಸ್ಥರ ಹಾಗೂ ಇಲಾಖೆ ಅಕಾರಿಗಳ ಮೇಲೆಕಾನೂನುಕ್ರಮ ಕೈಗೊಳ್ಳಲಾಗುವುದ ಎಂದು ಎಚ್ಚರಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಬೆಸ್ಕಾಂ ಇ.ಇ ಜಗದೀಶ್, ಎಇಇ ಮಯಾಕಣ್ಣ ನಾಯ್ಕ, ಎಇಇ ಬಸವರಾಜಪ್ಪ, ಕೆಇಬಿಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಪದಾ ಕಾರಿಗಳಾದ ರವೀಂದ್ರ, ಇಒ ಲಕ್ಷ್ಮಣ್, ಎಡಿ ಮಧುಸೂಧನ್, ಪುರಸಭೆ ಅಧ್ಯಕ್ಷಲಾಲಪೇಟೆ ಮಂಜುನಾಥ್, ಮಾಜಿ ಅಧ್ಯಕ್ಷರಾದ ನಂಜುಂಡಯ್ಯ, ಗೋವಿಂದರಾಜು, ಸದಸ್ಯರಾದ ಶ್ರೀಧರ್, ಆಲೀಂ, ಸಾದಿಕ್ ಹಾಗೂ ಕಾಂಗ್ರೆಸ್ ಮುಖಂಡರಾದ ಜಿಪಂ ಮಾಜಿ ಸದಸ್ಯ ಜಿ.ಜಿ.ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಪಿ.ಸಿ.ಕೃಷ್ಣಾರೆಡ್ಡಿ ಇದ್ದರು.