೧) ಆಸನದ ಹೆಸರು : ಸುಖ ವಕ್ರಾಸನ
೨) ಆಸನದ ಅರ್ಥ : ಸಂಸ್ಕೃತದಲ್ಲಿ ವಕ್ರ ಎಂದರೆ ತಿರುಚುವುದು ಎಂದರ್ಥ ಆಸನ ಎಂದರೆ ಭಂಗಿ ಎಂದು ಹಾಗಾಗಿ ವಕ್ರಾಸನ ಎಂದು ಕರೆಯಲಾಗುವುದು ಮತ್ತು ಪಶ್ಚಿಮಾತ್ಯರು ತಿರುಚಿದ ಭಂಗಿ ಎಂದು ಕರೆಯುವರು.
೩) ಅಭ್ಯಾಸದ ಕ್ರಮ : ಸುಖಾಸನದಲ್ಲಿ ಕುಳಿತುಕೊಂಡು ಎರಡು ಕಾಲುಗಳನ್ನು ಮುಂದೆ ಚಾಚಿ ಕಾಲುಗಳನ್ನು ಕೂಡಿಸಿ ಬಲ ಹಸ್ತವನ್ನು ಎಡ ಮಂಡಿಯ ಪಕ್ಕದಲ್ಲಿ ಅಳವಡಿಸಿ ಸಂಪೂರ್ಣ ಬೆನ್ನು ಮತ್ತು ಕುತ್ತಿಗೆಯನ್ನು ನಿಮ್ಮ ಎಡ ಭಾಗಕ್ಕೆ ತಿರುಗಿ ಎಡ ಹಸ್ತವನ್ನು ಹಿಂದೆ ಅಳವಡಿಸಬೇಕು ಹಾಗೂ ಬೆನ್ನು ಮತ್ತು ಕುತ್ತಿಗೆ ನೇರವಾಗಿರಬೇಕು. ದಯವಿಟ್ಟು ವಕ್ರಾಸನ ಚಿತ್ರ ಗಮನಿಸಿ.
೪) ಮಿತಿ : ವಕ್ರಾಸನವನ್ನು ಅಭ್ಯಾಸ ಮಾಡಲು ಕೆಲವು ಮಿತಿಗಳಿವೆ ಅವುಗಳೆಂದರೆ
ಹೃದಯದ ತೊಂದರೆಗಳು,
ಆಗಾಗ್ಗೆ ತಲೆತಿರುಗುವಿಕೆ, ಅತಿಯಾದ ತಲೆನೋವು,
ಜೀರ್ಣಕಾರಿ ಸಮಸ್ಯೆಗಳು,
ಗರ್ಭಾವಸ್ಥೆ,
ತೀವ್ರ ಬೆನ್ನು ನೋವು
ಬೆನ್ನುಮೂಳೆಯ ಡಿಸ್ಕ್ ಅಸ್ವಸ್ಥತೆಗಳು, ಇದ್ದಲ್ಲಿ ಅಭ್ಯಾಸ ಮಾಡುವಂತಿಲ್ಲ.
೫) ಉಪಯೋಗಗಳು :
* ವಕ್ರಾಸನವು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸಿ ಮಾಡಿ ಇನ್ಸುಲಿನ್ ಬಿಡುಗಡೆ ಮಾಡಿ ರಕ್ತಕ್ಕೆ ಸೇರಿಸುವುದರಿಂದ ಮಧುಮೇಹ ಹತೋಟಿಯಲ್ಲಿರುತ್ತದೆ.
* ವಕ್ರಾಸನವು ನಿಮ್ಮ ಬೆನ್ನುಮೂಳೆಯ ನರಗಳಿಗೆ ಮತ್ತು ಮಾಂಸಖಂಡಗಳಿಗೆ ರಕ್ತ ಪರಿಚಲನೆ ಮಾಡಿ ಆಮ್ಲಜನಕವನ್ನು ಸರಬರಾಜು ಮಾಡುವುದರಿಂದ ಬೆನ್ನಿನ ಜಡತ್ವ ಕಮ್ಮಿ ಮಾಡಿ ಬೆನ್ನು ಮತ್ತು ಕುತ್ತಿಗೆ ನಮ್ಯತೆಯನ್ನು ಹೆಚ್ಚಿಸುತ್ತದೆ.
* ಸೊಂಟ ಮತ್ತು ಹೊಟ್ಟೆಯ ಭಾಗದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಿ ಜೀರ್ಣಕ್ರಿಯೆ ಹೆಚ್ಚಿಸುವಲ್ಲಿ ಸಹಕಾರಿ.
* ಎಲ್ಲಾ ಆಸನಗಳಂತೆ ಈ ವಕ್ರಾಸನಕ್ಕೂ ಉಸಿರಾಟದ ಕ್ರಿಯೆ ಬೇಕಾಗುತ್ತದೆ ಹಾಗಾಗಿ ತಿರುಚಿದ ಭಂಗಿಯಲ್ಲಿ ಉಸಿರಾಟ ಮಾಡುವುದರಿಂದ ಶ್ವಾಸಕೋಶದ ಶುದ್ಧೀಕರಣಕ್ಕೆ ಸಹಕರಿಸುತ್ತದೆ.
* ಮುಟ್ಟಿನ ಸಮಯದಲ್ಲಿ ವಕ್ರಾಸನವನ್ನು ಮಹಿಳೆಯರು ಅಭ್ಯಾಸ ಮಾಡಬಾರದು. ಈ ಸಮಯದಲ್ಲಿ ಗರ್ಭಾಶಯವು ದುರ್ಬಲವಾಗಿರುತ್ತದೆ ಮತ್ತು ಗರ್ಭಿಣಿಯರು ಈ ವಕ್ರಾಸನವನ್ನು ತಪ್ಪಿಸಬೇಕು ಏಕೆಂದರೆ ಇದು ಹೊಟ್ಟೆಗೆ ಅಸ್ವಸ್ಥತೆಯನ್ನು ತರುತ್ತದೆ ಆದ್ದರಿಂದ ಈ ಭಂಗಿಯು ಗರ್ಭಾಶಯಕ್ಕೆ ಒಳ್ಳೆಯದಲ್ಲ.
* ಹೊಟ್ಟೆ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ವಕ್ರಾಸನವು ಬಲಪಡಿಸುತ್ತದೆ, ಮತ್ತು ಉತ್ತಮ ಜೀರ್ಣಕ್ರಿಯೆಯ ಜೀರ್ಣಕಾರಿ ಅಂಗಗಳನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ.
* ತ್ರಿದೋಷಗಳಲ್ಲಿ ಕಂಡುಬರುವ ಕಫದೋಷವು ಹೆಚ್ಚಾಗಿ ಜಡತ್ವ, ಅತಿಯಾದ ನಿದ್ರೆ, ಆಲಸ್ಯ, ದೇಹಸಾಮರ್ಥ್ಯದ ಕೊರತೆ, ಮನಸ್ಸಿನಲ್ಲಿ ಲವಲವಿಕೆ ಇಲ್ಲದಿರುವುದು ಹಾಗೂ ವಾತ ದೋಷದಿಂದ ಮಲಬದ್ಧತೆ, ಗ್ಯಾಸ್ಟಿçಕ್, ಮನಸ್ಸಿನ ಅಸಮತೋಲನ ಇವುಗಳಿಗೆ ವಕ್ರಾಸನ ಪರಿಣಾಮಕಾರಿಯಾಗಿ ಸಹಕರಿಸುತ್ತದೆ.
ವೃತ್ತಿಪರ ಯೋಗಾ ತರಬೇತುದಾರರ ಮಾರ್ಗದರ್ಶನದಲ್ಲಿ ಈ ಬಂಗಿಯನ್ನು ಮಾಡತಕ್ಕದ್ದು.