ಬೆಂಗಳೂರು: ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಕ್ಯಾಬಿನೆಟ್ ಹಾಲ್ನಲ್ಲಿ ಸಭೆ ನಡೆಯಲಿದೆ.ಹಲವು ಮಹತ್ವೆ ವಿಷಯಗಳ ಬಗ್ಗೆ ಚರ್ಚೆ ನಡೆದು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿಮೀನುಗಾರಿಕೆ ಬಂದರು ನಿರ್ಮಾಣ ಸಂಬಂಧ 209 ಕೋಟಿ ಯೋಜನೆಗೆ ಅನುದಾನ ಮಂಜೂರು ಮಾಡು ಸಾಧ್ಯತೆಯಿದೆ.ಮೀನುಗಾರಿಕಾ ಬಂದರುಗಳ ನಿರ್ಮಾಣ, ಬಂದರಿನಲ್ಲಿ ಹೂಳೆತ್ತುವ ಕಾಮಗಾರಿಗೆ 84.57ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಿಗೆ ಸಾಧ್ಯತೆಯಿದೆ. ಹೊಸ ಗೋಶಾಲೆಗಳ ನಿರ್ಮಾಣ, ಇರುವ ಗೋಶಾಲೆಗಳ ಬಲವರ್ಧನೆಗೆ ಒತ್ತು ನೀಡುವ ಸಂಬಂಧ 10.50 ಕೋಟಿ ಅನುದಾನ ಬಿಡುಗಡೆ ಸಾಧ್ಯತೆಯಿದೆ.
ಮೇಲ್ಮನೆಯ ಒಂದು ಸ್ಥಾನಕ್ಕೆ ನಾಮನಿರ್ದೇಶನ ಸಂಬಂಧ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗಳ ಕಟ್ಟಡ ನಿರ್ಮಾಣಕ್ಕೆ 149 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ ಸಾಧ್ಯತೆ, ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿರುವ ವಿವಿ ಬಗ್ಗೆ ಚರ್ಚೆಗೆ ಬರಲಿದೆ. ಸಣ್ಣ ನೀರಾವರಿ ನಿಯಮಗಳಿಗೆ ತಿದ್ದುಪಡಿ ಸಾಧ್ಯತೆ, ವೈಟ್ ಟಾಪಿಂಗ್
ಕಾಮಗಾರಿ ಹಿಂಪಡೆಯುವ ಸಾಧ್ಯತೆ, ಬಿಬಿಎಂಪಿ ವ್ಯಾಪ್ತಿಯ ವೈಟ್ ಟಾಪಿಂಗ್ ಕಾಮಗಾರಿ, ಹುಬ್ಬಳ್ಳಿ ಧಾರವಾಡ ಪಾಲಿಕೆ ವಿಭಜನೆ, ಪ್ರತ್ಯೇಕ ಧಾರವಾಡ ಪಾಲಿಕೆ ಮಾಡುವ ಬಗ್ಗೆ ಚರ್ಚೆ, ವಸತಿ ಶಾಲೆಗಳಿಗೆ ಬೆಡ್,ಬೆಡ್ ಶೀಟ್ ಖರೀದಿ, ಕಲ್ಯಾಣ ಕರ್ನಾಟಕ ಭಾಗದ ವಸತಿ ನಿಲಯಗಳಿಗೆ ಖರೀದಿಗೆ 52.93ಕೋಟಿ ಯೋಜನೆಗೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.