ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಆಯೋಜಿಸಿರುವ ನಾಟಕೋತ್ಸವದಲ್ಲಿ ಗುರುವಾರ ಶ್ರೀ ಹಾಸನಾಂಭ ಕಲಾಸಂಘದ ಕಲಾವಿದರು ಹೇಮಂತ ದೇವರಾಜ ಆಚಾರ್ಯ ನಿರ್ದೇಶನದಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿದರೆ ರವಿ, ಕವಿ ಎನ್.ಎಲ್.ಚನ್ನೇಗೌಡ ಮಾತನಾಡಿದರು.
ಸಾಹಿತಿ ಗೊರೂರು ಅನಂತರಾಜು, ಕಲಾವಿದರಾದ ಯರೇಹಳ್ಳಿ ಮಂಜೇಗೌಡರು, ನಿ.ಪೊಲೀಸ್ ಅಧಿಕಾರಿ ರಂಗಸ್ವಾಮಿ, ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ಮಹಾಂತೇಶ್, ನಿರ್ದೇಶಕ ಎ.ಸಿ.ರಾಜು, ದೇವರಾಜ್ ಮೊದಲಾದವರು ಇದ್ದರು.ನಾಟಕದಲ್ಲಿ ದಶರಥನ ಪಾತ್ರದಲ್ಲಿ ಗಾಡೇನಹಳ್ಳಿ ಕೃಷ್ಣೇಗೌಡ, ರಾಮನಾಗಿ ಶ್ರೀನಿವಾಸ್ ಹುರುಳಿ ಚಿಕ್ಕನಹಳ್ಳಿ, ಲಕ್ಷ್ಮಣ-ಗಣೇಶ್ ಎ.ಜಿ. ಆಂಜನೇಯ ಪಾತ್ರದಲ್ಲಿ ಪ್ರಕಾಶ್ಎನ್.ಎಸ್. ರಾವಣ- ಮಹೇಶ್ ಕೊಮ್ಮೆರಹಳ್ಳಿ, ಭರತ-ಚಿನ್ನಸ್ವಾಮಿ, ಶತೃಜ್ಞ-ಸಂಪತ್ ಆಚಾರ್, ವಶಿಷ್ಠ-ಬ್ಯಾಟಾಚಾರ್, ಸುಮಂತ್ರ-ಕುಮಾರಸ್ವಾಮಿ, ಬ್ರಾಹ್ಮಣ ಪಾತ್ರಗಳಲ್ಲಿ ಸಿ.ಎಂ.ಶ್ರೀಕಂಠಪ್ಪ, ಜಗದೀಶ್, ಮಾಯ ರಾವಣ-ಪುರುಷೋತ್ತಮ ಹೊನಗಾನಹಳ್ಳಿ, ಘೋರ ಸೂರ್ಪನಖಿ-ಹರೀಶ್ ಕಾಮಸಮುದ್ರ, ಕುಂಭಕರ್ಣ-ಎಂ.ವಿ.ರಾಜೇಗೌಡ, ವಾಲಿ-ಸೋಮಶೇಖರ್ ಸಾಣೇನಹಳ್ಳಿ, ಸುಗ್ರೀವ-ರಂಗೇಗೌಡ ಗಾಡೇನಹಳ್ಳಿ, ಜಠಾಯು-ಆಟೋ ಮಂಜಣ್ಣ, ವಿಭಿಷಣ-ನಂಜಪ್ಪ. ಅಂಗದ-ಮಂಜು ಉದ್ದೂರು, ಇಂದ್ರಜಿತ್-ಪರಮೇಶ್ಪಿ.ಕೆ.ಪಾಳ್ಯ ಮತ್ತು ಸ್ತ್ರೀ ಪಾತ್ರಗಳಲ್ಲಿ ಸೀತೆ-ತಾರಾ, ಮಂಡೋದರಿ- ಶೋಭಾರೈ ಮತ್ತು ಮಂಥರೆ ಪಾತ್ರದಲ್ಲಿ ವೇದ ನಟಿಸಿ ನಾಟಕ ಉತ್ತಮವಾಗಿ ಮೂಡಿಬಂತು.