ಮಾಲೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ನ ಮಾಲೂರು ತಾಲೂಕು ಸಮಿತಿಯ ಉದ್ಘಾಟನಾ ಸಮಾರಂಭವನ್ನು ಶಾಸಕ ಕೆ ವೈ ನಂಜೇಗೌಡಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ. ಮನುಷ್ಯನಿಗೆ ಹುಟ್ಟಿನಿಂದ ಮರಣದವರೆಗೂ ಮನುಷ್ಯನಿಗೆ ಬಟ್ಟೆಮುಖ್ಯವಾಗಿರುತ್ತದೆ. ಅಂತಹ ಬಟ್ಟೆಗಳಿಗೆ ರೂಪ ನೀಡುವ ಟೈಲರ್ಗಳು ಅಷ್ಟೇ ಮುಖ್ಯವಾಗಿರುತ್ತಾರೆ. ಅಸಂಘಟಿತ ಹೊಲಿಗೆ ವೃತ್ತಿಯವರನ್ನು ಸಂಘಟಿಸಿ ಅವರ ಜೀವನದ ಭದ್ರತೆಗಾಗಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ತಾಲೂಕಿನಲ್ಲಿ ನೂತನವಾಗಿ ತಾಲೂಕು ಸಮಿತಿಯ ಉದ್ಘಾಟನೆಯನ್ನು ಪ್ರಾರಂಭಿಸಿದ್ದೀರಾ ಹಾಗೂಹಲವಾರು ಬೇಡಿಕೆಗಳನ್ನು ಸಹ ನನ್ನಗಮನಕ್ಕೆ ತಂದಿದ್ದಾರೆ.
ನಾನು ಸಹಕಾರ್ಮಿಕ ಸಚಿವರ ಜೊತೆ ನಿಮ್ಮ ಸಮಸ್ಯೆಯ ಬೇಡಿಕೆಗಳನ್ನು ತಿಳಿಸುತ್ತೇನೆ. ಮಾರಿಕಾಂಬ ಟೈಲರ್ಸ್ ಟ್ರಸ್ಟ್ ವತಿಯಿಂದ ಟೈಲರ್ ಅನುಕೂಲಕ್ಕೆ ನಿವೇಶನ ನೀಡುವಂತೆ ಮನವಿ ಮಾಡಿದ್ದು. ಅದರಂತೆ ಪಟ್ಟಣದ ಯೋಜನಾ ಪ್ರಾಧಿಕಾರದಿಂದ ಎಸ್ಆರ್ ವ್ಯಾಲ್ಯೂ ವಿನ್ ಅರ್ಧ ಹಣವನ್ನು ನಿಮ್ಮ ಟ್ರಸ್ಟ್ ವತಿಯಿಂದ ಸರ್ಕಾರಕ್ಕೆ ಪಾವತಿಸಿ ನಿವೇಶನ ಪಡೆಯಬಹುದು ಅದಕ್ಕೆ ಸಂಪೂರ್ಣ ಬೆಂಬಲನೀಡುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕಸ್ಟೇಟ್ ಟೈಲರ್ ಅಸೋಸಿಯೇಷನ್ ನ ರಾಜ್ಯಾಧ್ಯಕ್ಷ ಬಿಎ ನಾರಾಯಣ್, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಕೋಶಾಧಿಕಾರಿ ರಾಮಚಂದ್ರ, ಡಿಸಿಸಿ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ಪ್ರದೀಪ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ಮಧುಸೂದನ್, ಪುರಸಭಾ ಸದಸ್ಯ ಬುಲೆಟ್ ವೆಂಕಟೇಶ್, ಮಾರಿಕಾಂಬ ಟೈಲರ್ ಟ್ರಸ್ಟ್ ಅಧ್ಯಕ್ಷ ಉಪೇಂದ್ರ, ಪ್ರಧಾನ ಕಾರ್ಯದರ್ಶಿ ವಾಸು, ಗುರುಪ್ರಸಾದ್, ಶ್ರೀನಿವಾಸ್, ಪರಮೇಶ್ ಇದ್ದರು.