ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬಾಗಿಲುಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಐದು ಜನ ಆರೋಪಿಗಳನ್ನು ರಾಜರಾಜೇಶ್ವರಿ ನಗರ ಪೋಲೀಸರು ಬಂಧಿಸಿರುತ್ತಾರೆ.ಅಂದಾಜು ಸುಮಾರು 22 ರಿಂದ 25 ವರ್ಷ ವಯಸ್ಸಿನ ಯುವಕರುಗಳಾದ ಜೈದೀಪ್, ಮಿಥುನ್, ದೀಪಕ್, ಸತೀಶ್ ಕುಮಾರ್
ಮತ್ತು ಚಂದನ್ ಎಂಬ ಆರೋಪಿಗಳನ್ನು ರಾಜರಾಜೇಶ್ವರಿ ನಗರ ಪೊಲೀಸ್ರು ಬಂಧಿಸಿ, ಅಂದಾಜು 11 ಲಕ್ಷ ರೂ ಬೆಲೆ ಬಾಳುವ ಮೋಟರ್ ಸೈಕಲ್ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳಿಂದ ಮೂರು ಮೋಟಾರ್ ಸೈಕಲ್, 103 ಗ್ರಾಂ ಚಿನ್ನಾಭರಣ ಮತ್ತು 2 1/4 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಆರೋಪಿಗಳು ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು, ಪುಟ್ಟೇನಹಳ್ಳಿಯಲ್ಲಿ ಒಂದು, ಹನುಮಂತ ನಗರದಲ್ಲಿ ಒಂದು ಮತ್ತು ವಿವಿ ಪರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿರುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಾರ್ಚ್ 26ರಂದು ಕೇರಳದಲ್ಲಿರುವ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮಕ್ಕೆ ಹೋಗಿ ಹಿಂತಿರುಗಿದ್ದ ಸಮಯದಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳೆವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿರುತ್ತಾರೆ.ಇಸೈ ರಾಜ್ ಮತ್ತು ರಾಮಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿ 437 ಗ್ರಾಂ ಚಿನ್ನಾಭರಣ 85 ಗ್ರಾಂ ಬೆಳ್ಳಿಯ ಆಭರಣಗಳು ಇವುಗಳ ಮೌಲ್ಯ 31 ಲಕ್ಷಗಳಾಗಿರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಆಯುಕ್ತರು ವಿವರಿಸಿದ್ದರು.ಈ ಆರೋಪಿಗಳಿಂದ ಒಟ್ಟು ಮೂರು ಕಣ್ಣ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಬಾಗಲೂರಿನಲ್ಲಿ ಎರಡು ಮತ್ತು ಯಲಹಂಕ ನ್ಯೂಟನ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿರುತ್ತದೆ.