ನೆಲಮಂಗಲ: ಮನೆಯೊಂದರಲ್ಲಿ ರಾತ್ರಿ ವೇಳೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ಮಾದನಾಯಕನಹಳ್ಳಿ ಪೆÇಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ. ದಾಸನಪುರ ಗ್ರಾಮದ ಟ್ರಕ್ ಅಂಡ್ ಟರ್ಮಿನಲ್ ರಸ್ತೆಯಲ್ಲಿ ಶಿವನ ದೇವಾಲಯ ಪಕ್ಕದಲ್ಲಿರುವ ತಿಮ್ಮಯ್ಯ ರತ್ನಮ್ಮ ಎಂಬುವರು ಮನೆಗೆ ಬೀಗ ಹಾಕಿ ಕೆಲಸ ನಿಮಿತ್ತ ಗೋವೇನಹಳ್ಳಿ ಗ್ರಾಮಕ್ಕೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ.
ಪಕ್ಕದ ಮನೆಯ ಮನು ಎಂಬುವವರು ಮನೆಯ ಬಾಗಿಲು ಅರ್ಧ ತೆರೆದಿರುವುದು ಗಮನಿಸಿ ಅನುಮಾನಗೊಂಡು ಮನೆಯವರಿಗೆ ಫೋನ್ ಮಾಡಿದ್ದಾರೆ ಬಳಿಕ ಮನೆಯವರು ಸ್ಥಳಕ್ಕೆ ಬಂದು ಪರಿಶೀಲಿಸಿ ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡುಬಂದಿದ್ದು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಮಾರು 36 ಗ್ರಾಂ ಚಿನ್ನ ಒಂದುವರೆ ಲಕ್ಷ ನಗದು ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಅಂದಾಜಿಸಲಾಗಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಕಳ್ಳರನ್ನು ಪತ್ತೆಹಚ್ಚಲು ಕ್ರಮಕ್ಕೆ ಮುಂದಾಗಿದ್ದಾರೆ.ಈ ಘಟನೆಯಿಂದ ಅಕ್ಕಪಕ್ಕದ ಮನೆಯವರು ಆತಂಕ ಗೊಳಗಾಗಿದ್ದಾರೆ.