ರಾಮನಗರ: ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ಗೆಜ್ಜಲುಗುಡ್ಡೆ ಬಳಿ ಮನೆ ಮೇಲೆ ಬಂಡೆ ಉರುಳಿ ಐದು ಜನರಿಗೆ ಗಾಯವಾಗಿರುವ ಘಟನೆ ನಡೆದಿದೆ. ಬುಧವಾರ ಸಂಜೆಯಿಂದ ರಾತ್ರಿವರೆಗೂ ಧಾರಾಕಾರ ಮಳೆ ರಾಮನಗರದಲ್ಲಿ ಸುರಿಯುತು.
ಈ ಪರಿಣಾಮ ಗೆಜ್ಜಲಗುಡ್ಡೆಯಲ್ಲಿ ವಾಸವಾಗಿದ್ದ ಸೈಯದ್ ಗೌಸ್ ಎಂಬುವರ ಮನೆ ಮೇಲೆ ದೊಡ್ಡ ಗಾತ್ರದ ಬಂಡೆ ಉರುಳಿದ ಪರಿಣಾಮ ಮನೆಯಲ್ಲಿ ಮಲಗಿದ್ದ ಇವರಿಗೆ ಗಾಯಗಳಾಗಿ ಅಪಾಯದಿಂದ ಪಾರಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂದು ಮುಂಜಾನೆ 3-30 ಗಂಟೆ ಸಮಯದಲ್ಲಿ ಘಟನೆ ನಡೆದಿದೆ ಗಾಯಗೊಂಡವರು : ಸೈಯದ್ ಗೌಸ್ (42) ಮನೆಯ ಯಜಮಾನ, ಆತನ ಪತ್ನಿ ಸೈಯದ್ ಪರ್ಮಾನ್ (32), ಮಕ್ಕಳಾದ ಸೈಯದ್ ಪರಮಾನ್ (14), ಸೈಯದ್ ಹಾಕಿಲ್ (7), ಸೈಯದ್ ಕಬೀರ್ (10) ಗಾಯಗೊಂಡವರು.
ಇವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೈಯದ್ ಕಬೀರ್ ಎಂಬ ಮಗುವಿಗೆ ಕಿವಿ ಭಾಗಕ್ಕೆ ಗಾಯವಾಗಿದ್ದು ಒಳ ರೋಗಿಯಾಗಿ ಈ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ವೈದ್ಯರು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಉಳಿದವರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ತಪ್ಪಿದ ಬಾರಿ ಅನಾಹುತ : ಮೇಲಿಂದ ಬಂಡೆ ದೊಡ್ಡ ಗಾತ್ರದ್ದೆ ಉರುಳಿದೆ ಬಂಡೆ ಮನೆಯಿಂದ ಪಕ್ಕಕ್ಕೆ ಸರಿದು ಗೋಡೆಗೆ ಗುದ್ದಿ ಬಂದಿದೆ ಇದರಿಂದ ಗೋಡೆ ಕುಸಿದು ಗೋಡೆಗೆ ಕಟ್ಟಿದ್ದ ಸಿಮೆಂಟ್ ಇಟ್ಟಿಗೆಗಳು ಮಲಗಿದ್ದವರ ಮೇಲೆ ಬಿದ್ದ ಪರಿಣಾಮ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.
ಬಹುಶಹ ಬಂಡೆ ಮನೆ ಮೇಲೆ ಉರುಳಿದರೆ ಬಾರಿ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಪೆÇಲೀಸ್ ಮತ್ತು ನಗರಸಭೆ ಹಾಗೂ ತಾಲ್ಲೂಕು ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.