ಶೈಲೂಸಂ ಆರ್ಟ್್ಸ ಅಂಡ್ ಕ್ರಿಯೇಶನ್ಸ್ ಸಂಸ್ಥೆ ಸುಮಾರು ೧೪ ವರ್ಷಗಳಿಂದ ಅನೇಕ ಕಲೋತ್ಸವಗಳನ್ನು ಆಯೋಜಿಸಿ ವಿಶಿಷ್ಟ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದೆ. ಅಂತಹ ಉತ್ಸವಗಳಲ್ಲಿ ನಗರದ ನಯನ ಸಭಾಂಗಣದಲ್ಲಿ ನಡೆದ ಚಿಣ್ಣರ ಕಲರವ (೨೩ನೇ ಆವೃತ್ತಿ) ಪ್ರಮುಖವಾದುದು.
ಇದರಲ್ಲಿ ಗುರುಗಳಾದ ಮಿಥುನ್ ಶಾಮ್ ರವರ ವಿದ್ಯಾರ್ಥಿಗಳು , ಗುರು ವಿ ಹರ್ಷಿತಾ ರವರ ಶಿಷ್ಯರಾದ ಸುಮನ , ಗುರುವಿದುಷಿ ಭಾವನಾ ರವರ ಶಿಷ್ಯರಾದ ಧನ್ಯಶ್ರೀ, ಗುರು ಶ್ರೀ ಸತೀಶ್ ಬಾಬುರವರ ಶಿಷ್ಯರುಗಳಾದ ಅಂಕಿತ ಮತ್ತು ಸಂಪದ ವಿಶೇಷ ಭರತನಾಟ್ಯ ಸ್ತುತಿಗಳನ್ನು ನೀಡಿ ಸಭಿಕರ ಮನಸೂರೆ ಗೊಳಿಸಿದರು. ವಿಶೇಷವೆಂದರೆ ಎಲ್ಲಾ ನೃತ್ಯ ಪ್ರದರ್ಶನಗಳು ಪ್ರತ್ಯಕ್ಷ ವಾದ್ಯ ಪರಿಕರಗಳೊಂದಿಗೆ ನಡೆದಿದ್ದು. ಒಂದು ಸಂಸ್ಥೆಯು ವಿವಿಧ ಸಂಸ್ಥೆಗಳ ಮಕ್ಕಳಿಗೆ ಇಂತಹ ಒಂದು ಅವಕಾಶ ಕಲ್ಪಿಸಿ ಕೊಟ್ಟಿರುವುದು ಶ್ಲಾಘನೀಯ.
ಈ ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಗುರುವಿದೂಶಿ ಶುಭ ಧನಂಜಯ್ ರವರು ಉದ್ಘಾಟಿಸಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಡಾ. ಮೀನಾ ರಾಜ್ ಗೌಡರನ್ನು ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಡಾ.ಮೀನಾ ರಾಜ್ ಗೌಡರು ಹಿರಿಯ ಪತ್ರಕರ್ತರಾದ ಶ್ರೀ ಲೇಪಾಕ್ಷಿ ಸಂತೋಷ್ ರಾವ್ ರವರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಇಂತಹ ವಿಭಿನ್ನ ಸಾಂಪ್ರದಾಯಿಕ ಕಲೆಗಳಿಗೆ ಪ್ರೋತ್ಸಾಹಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿ ಅನಂತ ವಿಕ್ರಂ ರವರು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಅತ್ಯಂತ ವಿಶೇಷವಾಗಿದೆ ಎಂದರು.
ಚೈತ್ರ ರಾವ್ ಹಾಗೂ ಶ್ರೀ ನರಸಿಂಹ ಆಚಾರ್ ರವರು ಈ ವಿಶೇಷ ಕಾರ್ಯಕ್ರಮದ ರೂವಾರಿಗಳಾಗಿದ್ದಾರೆ. ಅದರಲ್ಲೂ ಶ್ರೀ ಅನಂತ ವಿಕ್ರಂ ರವರು ಈ ಕಾರ್ಯಕ್ರಮದ ಆಯೋಜನೆ ಅಷ್ಟೇ ಅಲ್ಲದೆ ಸುಮಾರು ೨ ಗಂಟೆಗಳ ಕಾಲ ಸುಮಧುರವಾಗಿ ಆಡಿ ಮನರಂಜಿಸಿರುವುದು ಗಮನಾರ್ಹ. ಇವರೊಂದಿಗೆ ನಾಡಿನ ಹೆಸರಾಂತ ವಿದ್ವಾಂಸರುಗಳಾದ ವಿದ್ವಾನ್ ಪವನ್ ಮಾಧವ್ ಮತ್ತು ವಿದ್ವಾಂಸದ ಸ್ಕಂದ ಕುಮಾರ್ ಮೃದಂಗ ಮತ್ತು ಕೊಳಲಿನ ನಾದದಲ್ಲಿ ಸಹಕರಿಸಿದರು.
ಇದಲ್ಲದೆ ಶೈಲೂಸಂ ಸಮಾಜಮುಖಿ ಕಾರ್ಯವೈಕರಿಯಲ್ಲೂ ಎತ್ತಿದ ಕೈ. ಈ ಬಾರಿ ‘ಶೈಲೂಸಂ ರತ್ನ’ ಪ್ರಶಸ್ತಿಯನ್ನು ಡಾ. ವಿಜಯಲಕ್ಷಿ÷್ಮ ಬಾಳೆಕುಂದ್ರಿ ಅವರಿಗೆ, ಶೈಲೂಸಂ ವೈದ್ಯ ರತ್ನ ಹಾಗೂ ವಿಶ್ವಕರ್ಮ ನಾಡೋಜ ಡಾಕ್ಟರ್ ಉಮೇಶ್ ರವರಿಗೆ ಶೈಲೂಸಂ ಸಮಾಜ ಸೇವ ರತ್ನ ನೀಡಿ ಗೌರವಿಸಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ದಂತವೈದ್ಯರಾದ ಡಾ.ರಾಗಶ್ರೀ ರವರು ನೆರವೇರಿಸಿದರು.