ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ಊಚನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮಮತಾ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಿಂದಿನ ಅಧ್ಯಕ್ಷರಾಗಿದ್ದ ನಿರ್ಮಲ ಪುಟ್ಟಶೇಖರ್ ನೀಡಿದ ರಾಜೀನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಚುನಾವಣೆಯ ಪ್ರಕ್ರಿಯೆಯಲ್ಲಿ ಮಮತಾ ಕೃಷ್ಣೇಗೌಡ ಹೊರತುಪಡಿಸಿ ಉಳಿದ ಯಾವಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಮಮತಾ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು.ನೂತನ ಅಧ್ಯಕ್ಷೆ ಅಭಿನಂದಿಸಿ ಮಾತನಾಡಿದ ಗ್ರಾಮದ ಮುಖಂಡ ಊಚನಹಳ್ಳಿ ನಟರಾಜು ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುವವರ ಪರಿಸ್ಥಿತಿ ಕಷ್ಟಕರವಾಗಿದೆ.ಈ ಸಂದರ್ಭದಲ್ಲಿ ಹೈನುವಾರಿಕೆ ನೆರವಾಗಲಿದೆ.
ಹೈನುಗಾರಿಕೆಯು ಬಹಳ ದೊಡ್ಡ ಉದ್ಯಮವಾಗಿ ಬೆಳೆದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. ಹೈನುಗಾರಿಕೆಯಿಂದ ಆದಾಯ ಕಾಣಬಹುದಾಗಿದೆ.ಈ ಅವಕಾಶ ಬಳಸಿಕೊಳ್ಳಬೇಕು ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ನಿರ್ದೇಶಕರು ಸಂಘದಲ್ಲಿ ರಾಜಕಾರಣ ಬೆರಸದೇ ಪಕ್ಷಾತೀತವಾಗಿ ಪಾಲ್ಗೊಂಡು ಸಂಘದ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷೆ ನಿರ್ಮಲ ಕೃಷ್ಣೆಗೌಡ ನನ್ನನ್ನು ಅವಿರೋಧವಾಗಿ ಅಧ್ಯಕ್ಷರಾಗಲು ಸಹಕರಿಸಿದ ನಮ್ಮ ಗ್ರಾಮದ ಮುಖಂಡರು ಹಾಗೂ ಸಂಘದ ಸದಸ್ಯರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.ಷೇರುದಾರರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು.ಸಂಘವು ಉಳಿದರೆ ನಾವೆಲ್ಲರೂ ಉಳಿದಂತೆ.ಆದ್ದರಿಂದ ನನ್ನ ಆಡಳಿತ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಮಂಜುಳಾ ಚಲುವರಾಜು, ನಿರ್ದೇಶಕರಾದ ನಿರ್ಮಲ ಪುಟ್ಟಶೇಖರ್, ರೂಪ ಪುಟ್ಟಸ್ವಾಮಿ, ಸವಿತಾ ಸಂತೋಷ್, ಶಶಿಕಲಾ ಯೋಗೇಶ್, ಲತಾ ನಾಗೇಶ್, ಗ್ರಾಮದ ಹಿರಿಯ ಮುಖಂಡ ಸದಾಶಿವ, ಪುಟ್ಟಶೇಕರ್, ಪುಟ್ಟಸ್ವಾಮಿ, ಕೃಷ್ಣಗೌಡ, ಸಂಘದ ಕಾರ್ಯದರ್ಶಿ ಭಾಗ್ಯ ಬಿ ಕೆ, ಶಿವಮೂರ್ತಿ, ಸೇರಿದಂತೆ ಗ್ರಾಮಸ್ಥರಿದ್ದರು.