ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮನೋಜ್ (17)ಮತ್ತು ರಿತ್ವಿಕ್ (17) ಎಂಬ ಇಬ್ಬರು ಯುವಕರುಗಳು ನಿನ್ನೆ ಮಧ್ಯಾಹ್ನ ದ್ವಿಚಕ್ರ ವಾಹನ ಅತಿ ವೇಗವಾಗಿ ಚಲಾಯಿಸಿ ಆಯ ತಪ್ಪಿ ರಸ್ತೆ ವಿಭಜಕಕ್ಕೆ ಮತ್ತು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.
ರಿಂಗ್ ರೋಡ್ ರಸ್ತೆಯಲ್ಲಿರುವ ಇಲಿಯಾಜನಗರದ ಬಳಿ ಘಟನೆ ಸಂಭವಿಸಿರುತ್ತದೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿರುತ್ತಾರೆ.