ಬೆಂಗಳೂರು: ದ್ವಿಚಕ್ರ ಸವಾರನೊಬ್ಬ ರಸ್ತೆ ಬದಿಯಲ್ಲಿ ಹಾಕಿದ ಮರಳುಗುಡ್ಡೆ ಮೇಲೆ ಹೋಗಿ ಆಯಾ ತಪ್ಪಿ ರಸ್ತೆಗೆ ಬಿದ್ದು ಟಾಟಾ ಏಸ್ ಗಾಡಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ಅವರ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಜರುಗಿದೆ. ನಾಗರಬಾವಿ ಕಡೆಯಿಂದ ನಾಯಂಡಳ್ಳಿಗೆ ಹೋಗುವ ರಸ್ತೆಯಲ್ಲಿ ರಾತ್ರಿ ೯:೦೦ ಸುಮಾರಿಗೆ ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಮನು(೨೭) ಎಂಬುವರು ಅತಿ ವೇಗವಾಗಿ ಬಂದು ಬಿದ್ದಾಗ ಆತನನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದಾಗ ಆತನು ಮೃತಪಟ್ಟಿರುತ್ತಾನೆ ಎಂದು ಬ್ಯಾಟರಾಯನಪುರ ಸಂಚಾರಿ ಪೊಲೀಸರು ತಿಳಿಸಿರುತ್ತಾರೆ.