ಚಂದಾಪುರ: ತೆರಿಗೆ ಸಂಗ್ರಹದಲ್ಲಿ ಆಗುತ್ತಿದ್ದ ಸೋರಿಕೆಗಳಿಗೆಲ್ಲಾ ಕಡಿವಾಣ ಹಾಕಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ರಾಜ್ಯದಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡುತ್ತಿದ್ದಿವಿ ಎಂಬುದಾಗಿ ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಡಾಪುರ ರಮೇಶ್ ರೆಡ್ಡಿ ತಿಳಿಸಿದರು.
ತಾಲ್ಲೂಕಿನ ಮರಸೂರು ಗ್ರಾಮದಲ್ಲಿರುವ ಶಂಕರ್ ನಾಗ್ ರಂಗಮಂದಿರದ ಆವರಣದಲ್ಲಿ ಮರಸೂರು ಗ್ರಾಮ ಪಂಚಾಯಿತಿ ಮತ್ತು ವಾಸನ್ ಹೈ ಕೇರ್ ಸಂಸ್ಥೆ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು.ವಿಶೇಷವಾಗಿ ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ 10 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಉಚಿತ ಆಂಬುಲೆನ್ಸ್ ಸೇವೆ. ಅಂಗವಿಕಲರಿಗೆ ಪ್ರತಿ ತಿಂಗಳು 1 ಸಾವಿರ ಪ್ರೋತ್ಸಾಹ ಧನ ವಿತರಣೆ. ಪಂಚಾಯಿತಿ ಊಟದ ಮನೆ. ಕಸ ವಿಲೇವಾರಿ ಘಟಕ ನಿರ್ಮಾಣ. ಶಾಲಾ ಮಕ್ಕಳಿಗೆ ಆರೋಗ್ಯ ಕಿಟ್. ಸೈಕಲ್ ವಿತರಣೆ ಮತ್ತು ಪ್ರೋತ್ಸಾಹ ದನ ವಿತರಣೆ. ಅಂತಿಮ ಸಂಸ್ಕಾರ ಹೆಸರಿನಲ್ಲಿ 15 ಸಾವಿರ ವಿತರಣೆ. ಪಂಚಾಯಿತಿ ಊಟದ ಮನೆ ಸೇರಿದಂತೆ ಮತ್ತಷ್ಠು ಜನಪರ ಕಾರ್ಯ ಕ್ರಮಗಳನ್ನು ಪಂಚಾಯಿತಿ ವತಿಯಿಂದ ಮಾಡಲಾಗುತ್ತಿದೆ ಎಂದರು.
ಪಂಚಾಯತಿ ಅಭಿವೃದ್ದಿ ಅಧಿಕಾರಿ ಮುರಳಿ ಮಾತನಾಡಿ ಮುಂದಿನ ದಿನಗಳಲ್ಲಿ ಮೊಬೆಲ್ ಕ್ಲೀನಿಕ್ ಸೇರಿದಂತೆ ಮತ್ತಷ್ಠು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಲ್ಲ ಸದಸ್ಯರ ಹಾಗೂ ಗ್ರಾಮದ ನಾಗರೀಕರ ಸಹಕಾರದಿಂದ ಪ್ರಸ್ತುತ ಸಾಲಿನಲ್ಲಿ ತೆರಿಗೆ ಸಂಗ್ರಹದಲ್ಲಿ ಸುಮಾರು 9 ಕೋಟಿ ರೂಪಾಯಿ ಕ್ರಿಯಾಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಮರಸೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ ಸೋಮಶೇಖರ್. ಗ್ರಾಮ ಪಂಚಾಯಿತಿ ಸದಸ್ಯರಾದ ಮಡಿವಾಳ ಮಣಿಕಂಠ. ಶ್ರೀಮತಿ ರಶ್ಮೀ ಅನಿಲ್ ರೆಡ್ಡಿ. ವೆಂಕಟಸ್ವಾಮಿರೆಡ್ಡಿ. ಚಂದ್ರಕಲಾ ಯಲ್ಲಪ್ಪ. ಸುದಾ ಮುರಳಿ. ನಾಗಲಷ್ಮೀ ಮೋಹನ್. ನಾಗರಾಜ್. ಪಿಡಿಒ ಮುರಳಿ. ಕಾರ್ಯದರ್ಶಿ ಯೋಗೇಶ್. ಕರವಸೂಲಿಗಾರ ಸಂಪಗಿ ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು.