ಬೆಂಗಳೂರು: ತಿಪಟೂರಿನ ಪ್ರತಿಷ್ಠಿತ ಮರ್ಚಂಟ್ಸ್ ಕೋಆಪರೇಟಿವ್ ಬ್ಯಾಂಕ್ಗೆ ನೂತನ ನಿರ್ದೇಶಕರು ಆಯ್ಕೆಯಾಗಿದ್ದಾರೆ.ವಿ. ಮಂಜುನಾಥ್, ಜನಾರ್ದನ್, ಬಾಗೇಪಲ್ಲಿ ಬಿ.ಎಸ್. ನಟರಾಜ್, ವೆಂಕಟಾಚಲಪತಿ ಬಿ.ಎಸ್., ನಾಗೇಂದ್ರ ಗುಪ್ತ ಬಿ.ಎಸ್., ಸಿ.ಎನ್. ಹರಿಬಾಬು, ಕುಮಾರ್ ಅಂಡ್ ಕುಮಾರ್ ಜಿ.ಎನ್. ವಿಶ್ವನಾಥ್, ಪಂಚವಟಿ ಶಿವಶಂಕರ್, ಕಾಡನೂರು ಮಂಜುನಾಥ್ ಕೆ.ಎನ್., ರುದ್ರೇಶ್ ಹೆಚ್.ಎಂ., ಸರಸ್ವತಿ ಭೂಷಣ್ ಎಸ್.ಬಿ., ಸರಿತ ವೈ.ಎನ್. ಅವರು ಭಾನುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾಗಿರುವ ಸದಸ್ಯರ ಪೈಕಿ ಬಾಗೇಪಲ್ಲಿ ಬಿ.ಎಸ್. ನಟರಾಜ್ ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿದ್ದು, ತಿಪಟೂರು ನಗರದ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಾ ಇದ್ದು, ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡು ಜನಾನುರಾಗಿ ವ್ಯಕ್ತಿ ಎನಿಸಿಕೊಂಡಿದ್ದಾರೆ.