ಬೆಂಗಳೂರು: ಬೆಂಗಳೂರಿನಾದ್ಯಂತ ಮರ ಕಡಿಯುವ ಮತ್ತು ಕತ್ತರಿಸುವ ಸೇವೆಗಳ ಬಗ್ಗೆ 85ಕ್ಕೂ ಹೆಚ್ಚು ಖಾಸಗಿ ಏಜೆನ್ಸಿಗಳು ಬಹಿರಂಗವಾಗಿ ಜಾಹೀರಾತು ನೀಡುತ್ತಿದ್ದು, ಬಿಬಿಎಂಪಿ ಅರಣ್ಯ ವಿಭಾಗವು ಪ್ರತಿಯೊಂದನ್ನು ಪತ್ತೆ ಹಚ್ಚಲು ಪ್ರಾರಂಭಿಸಿದೆ. ಅಂತಹ ಯಾವುದೇ ಪ್ರಯತ್ನಗಳನ್ನು ಕೈಗೊಳ್ಳುವ ಮೊದಲು ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯಲು ತನ್ನ ಗ್ರಾಹಕರಿಗೆ ತಿಳಿಸುವಂತೆ ಸ್ಥಳೀಯ ಸರ್ಚ್ ಇಂಜಿನ್ Justdial ಗೆ ನೋಟಿಸ್ ನೀಡಿದೆ.
ಈ ಕುರಿತು TNSE ಜೊತೆಗೆ ಮಾತನಾಡಿದ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ, ಕೆಲವು ಖಾಸಗಿ ಏಜೆನ್ಸಿಗಳು ಮರಗಳನ್ನು ಕಡಿಯಲು ಮುಂದಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ವಲಯಗಳ ವ್ಯಾಪ್ತಿಯ ಅರಣ್ಯಾಧಿಕಾರಿಗಳ ಗಮನಕ್ಕೆ ತರುತ್ತಿಲ್ಲ. ಸಾರ್ವಜನಿಕರಿಂದ ಸೇವೆಗೆ ಹಣ ವಸೂಲಿ ಕೂಡಾ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ಅಕ್ರಮವನ್ನು ಕೊನೆಗೊಳಿಸಲು, ನಾವು ಏಜೆನ್ಸಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಬಿಬಿಎಂಪಿ ಅರಣ್ಯ ಇಲಾಖೆ Justdial ಗೆ ಪತ್ರ ಬರೆದಿದ್ದು, ಮರ ಕಡಿಯಲು ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿರುವ ಬಗ್ಗೆ ತನ್ನ ಗ್ರಾಹಕರನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
‘ಟ್ರೀ ಡಾಕ್ಟರ್’ ಎಂದು ಜನಪ್ರಿಯವಾಗಿರುವ ನಗರ ಸಂರಕ್ಷಣಾಧಿಕಾರಿ ವಿಜಯ್ ನಿಶಾಂತ್, ಕೆಲವು ವಾಣಿಜ್ಯ ವ್ಯಾಪಾರ ಮಳಿಗೆಗಳು ಸ್ಪಷ್ಟವಾಗಿ ಕಾಣವೆಂದು ಅಕ್ರಮವಾಗಿ ಮರ ಕುಡಿಯುತ್ತಿದ್ದಾರೆ. ಈ ಮೂಲಕ ನಗರದ ಹಸಿರು ಹೊದಿಕೆಯನ್ನು ಕಡಿಮೆ ಮಾಡುತ್ತಿದ್ದಾರೆ. ಯಾವುದೇ ಉದ್ದೇಶಕ್ಕಾಗಿ ಮರ ಕಡಿಯಲು ಬಿಬಿಎಂಪಿ ಅರಣ್ಯಾಧಿಕಾರಿಗಳ ಮುಂದೆ ಬರಬೇಕು ಮತ್ತು ಕಡಿಯಬೇಕಾದ ಮರಗಳ ಸಂಖ್ಯೆ 50 ಆಗಿದ್ದರೆ ಅದು ವೃಕ್ಷ ಸಮಿತಿಯ ಮುಂದೆ ಬರುತ್ತದೆ. ಅನೇಕ ಅಂಗಡಿಗಳ ಮಾಲೀಕರು ಮರ ಕಡಿಯಲು ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿ ಪಡೆಯುತ್ತಿಲ್ಲ. ಇದು ಮರ ಕಡಿಯುವ ಏಜೆನ್ಸಿಗಳು ಪ್ರವರ್ಧಮಾನಕ್ಕೆ ಬರಲು ಕಾರಣವಾಗಿದೆ ಎಂದರು.