ಬೆಂಗಳೂರು: ಮಲ್ಲೇಶ್ವರಂನ ಶ್ರೀ ಭ್ರಮರಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಮತ್ತು ಕಾಡುಮಲ್ಲೇಶ್ವರ ಗೆಳಯರ ಬಳಗದ ವತಿಯಿಂದ
ಕಡಲೆಕಾಯಿ ಪರಿಷೆ ಮತ್ತು ಹುಣ್ಣಿಮೆ ಹಾಡು-೨೦೦ ಸಮಾರಂಭ ಉದ್ಘಾಟನೆಯನ್ನು ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು, ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್, ಯುವ ಕಾಂಗ್ರೆಸ್ ಮುಖಂಡರಾದ ರಕ್ಷಿತ್ ಶಿವರಾಂರವರು ಕಡಲೆಕಾಯಿ ಬಸವಣ್ಣನಿಗೆ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ನಾಲ್ಕು ದಿನಗಳ ಕಾಲ ಜರುಗುವ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದರು.
೨೦೦೦ಕೆ.ಜಿ.ಕಡಲೆಕಾಯಿ ಇಂದ ಕಲೆಕಾಯಿ ಬಸವಣ್ಣ ಮೂರ್ತಿ, ಮಂಟಪ ನಿರ್ಮಿಸಲಾಗಿದೆ. ಕರ್ನಾಟಕ, ಆಂಧ್ರ, ತಮಿಳುನಾಡು, ತೆಲಂಗಾಣದಿAದ ನೂರಾರು ರೈತರು ವಿವಿದ ತಳಿಯ ಕಡಲೆಕಾಯಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಬೀದಿ ಬದಿಯ ನೂರಾರು ವ್ಯಾಪಾರಿಗಳಿಗೆ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸ್ವಚ್ಚತೆ ಆದ್ಯತೆ ಮತ್ತು ಪ್ಲಾಸ್ಟೀಕ್ ಮುಕ್ತ ಕಡಲೆಕಾಯಿ ಪರಿಷೆ ಮಾಡಲು ಸಾರ್ವಜನಿಕರಿಗೆ ಪೇಪರ್ ಕವರ್ ಮತ್ತು ಬಟ್ಟೆ ಕೈಚೀಲ ಉಚಿತವಾಗಿ ನೀಡಲಾಗುತ್ತಿದೆ.
೨೦೦ಹುಣ್ಣಿಮ ಹಾಡು ಉದ್ಘಾಟಿಸಲಾಗಿದೆ ಪ್ರತಿದಿನ ಸಾಂಸ್ಕöÈತಿಕ ಕಾರ್ಯಕ್ರಮ ಜರುಗಲಿದೆ. ನಾಡು, ನುಡಿ, ಕಲೆ ಸಾಹಿತ್ಯ ಸಾಂಸ್ಕöÈತಿಕ ಪರಂಪರೆ ಮೊದಲ ಆದ್ಯತೆ ನೀಡಲಾಗಿದೆ ನಾಲ್ಕು ದಿನದಲ್ಲಿ ೧೦ಲಕ್ಷ ಭಕ್ತಾಧಿಗಳು ಬಸವಣ್ಣ ದರ್ಶನ ಮಾಡುವ ಸಾಧ್ಯತೆ.
ಬರುವ ಭಕ್ತಾಧಿಗಳಿಗೆ ಸುರಕ್ಷತೆ, ಸರತಿ ಸಾಲಿನ ವ್ಯವಸ್ಥೆ ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಇತಿಹಾಸಕ್ಕೆ ಮೆರಗು ನೀಡುವ ೮ನೇ ಕಡಲೆಕಾಯಿ ಪರಿಷೆಗೆ ಸಾರ್ವಜನಿಕರು ಆಗಮಿಸಬೇಕಾಗಿ ಎಂದು ಅಧ್ಯಕ್ಷರಾದ ಬಿ.ಕೆ.ಶಿವರಾಂರವರು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್ ನಾಯ್ಡು, ಶ್ರೀವಲ್ಲಭ, ಚಂದ್ರಮೌಳಿ, ಎಲ್.ಎನ್.ಪ್ರಭು, ರಾಜಶಶಿಧರ್, ಡಾ||ಲೀಲಾ ಸಂಪಿಗೆರವರು ಉಪಸ್ಥಿತರಿದ್ದರು.