ಮಳೆ ಮತ್ತೆ ಶುರುವಾಗುತ್ತಿದೆ, ಇನ್ನೇನು ಮಳೆ ನಿಂತು ಹೋಯಿತು ಅಂತಾ ರೈತ ಸಮುದಾಯ ಸೇರಿದಂತೆ ಸಾಮಾನ್ಯ ಜನರು ಖುಷಿಪಡುವ ಮೊದಲೇ ಮತ್ತೆ ಮಳೆ ಅಬ್ಬರವು ಶುರುವಾಗಿ ಖುಷಿ ಎಲ್ಲಾ ಮಾಯವಾಗಿ ಹೋಗುತ್ತಿದೆ. ಹೀಗಿದ್ದಾಗ ಮಳೆ ಮತ್ತೊಮ್ಮೆ ನಮ್ಮ ಕನ್ನಡ ನಾಡಲ್ಲಿ ತನ್ನ ರ್ಭಟ ತೋರಿಸಲು ಸಿದ್ಧತೆ ನಡೆಸಿದ್ದು, ಮುಂದಿನ ೪೮ ಗಂಟೆಯಲ್ಲಿ ಮಳೆಯ ಅಸಲಿ ರ್ಭಟ ಶುರುವಾಗಲಿದೆ. ಹಾಗಾದ್ರೆ ರ್ಜರಿ ಮಳೆ ಬೀಳಲಿದೆ.
ಮಳೆ ಬರಲಿ… ಮಳೆ ಬರಲಿ… ಅಂತಾ ಕಳೆದ ಬೇಸಿಗೆಯಲ್ಲಿ ಅಂದ್ರೆ ೨೦೨೪ರ ಮಾಚ್ ಮತ್ತು ಏಪ್ರಿಲ್, ಮೇ ತಿಂಗಳಲ್ಲಿ ಜನರು ದೇವರ ಬಳಿ ಬೇಡಿಕೊಂಡಿದ್ದರು. ಅಲ್ಲದೆ ಕಪ್ಪೆ ಮದುವೆ ಸೇರಿದಂತೆ ಮಳೆ ಬರಲು ಏನೆಲ್ಲಾ ಬೇಕೋ ಅದೆಲ್ಲಾ ರಿಸ್ ಮಾಡಿದ್ದರು. ಆದರೆ ಈಗಿನ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ, ಮಳೆ ನಿಲ್ಲಿಸಲು ಯಾವುದಾದರೂ ಪೂಜೆ ಇದೆಯಾ? ಎಂಬ ಪ್ರಶ್ನೆ ಇದೀಗ ಮೂಡುವಂತೆ ಮಾಡಿದೆ. ಮುಂದಿನ ೪೮ ಗಂಟೆಯಲ್ಲಿ ಶುರುವಾಗಲಿದೆ ರ್ಜರಿ ಮಳೆ ಎಂಬ ಮುನ್ನೆಚ್ಚರಿಕೆ ಕೂಡ ಸಿಕ್ಕಿದೆ!
ಮಳೆ ರ್ಭಟ ಮತ್ತೆ ಕನ್ನಡ ನಾಡಿನ ನೆಲವನ್ನು ಒದ್ದೆ ಮಾಡುತ್ತಿದೆ. ಹೀಗಾಗಿಯೇ ರೈತರಿಗೆ ಟೆನ್ಷನ್ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಳೆ ಪರಿಣಾಮ ಅನ್ನದಾತ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಯನ್ನ ಕಳೆದುಕೊಂಡಿದ್ದಾರೆ. ಹೀಗಿದ್ದರೂ, ಮಳೆರಾಯ ಮಾತ್ರ ಸೈಲೆಂಟ್ ಆಗುತ್ತಿಲ್ಲ.
ಹೀಗಿದ್ದಾಗ ಮುಂದಿನ ೪೮ ಗಂಟೆಗಳ ಬಳಿಕ ಮತ್ತೆ ರ್ಜರಿ ಮಳೆ ಅಬ್ಬರಿಸುವ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಮಳೆ ಬೀಳಲಿರುವ ಆ ಜಿಲ್ಲೆಗಳು ಯಾವುವು? ಅಂದಹಾಗೆ ಇದೀಗ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಇದರ ಪರಿಣಾಮವಾಗಿ ಚಂಡಮಾರುತವೇ ಸೃಷ್ಟಿಯಾಗಿದೆ. ಹೀಗಾಗಿ ಮುಂದಿನ ೪೮ ಗಂಟೆಗಳಲ್ಲಿ ಕಡಿಮೆ ಒತ್ತಡ ರೂಪುಗೊಳ್ಳುವ ಸಾಧ್ಯತೆ ಇದ್ದು, ಚಂಡಮಾರುತ ತಮಿಳುನಾಡು & ಶ್ರೀಲಂಕಾ ಕರಾವಳಿ ಮರ್ಗವಾಗಿ ಸಂಚಾರ ಮಾಡಲಿದೆ. ಇದೇ ಕಾರಣಕ್ಕೆ ರ್ನಾಟಕವೂ ಸೇರಿದಂತೆ, ದಕ್ಷಿಣ ಭಾರತದಲ್ಲಿ ಭಾರಿ ಮಳೆ ಬೀಳಲಿದೆ ಎಂದು ಎಚ್ಚರಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಾಳೆ ಅಂದ್ರೆ ಸೋಮವಾರದ ನಂತರ ರ್ಥಾತ್ ನವೆಂಬರ್ ೧೧ರ ನಂತರ ರ್ಜರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ, ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲೂ ಮಳೆಯು ಎಂಟ್ರಿ ಕೊಡಲಿದೆ. ಬೆಂಗಳೂರಲ್ಲಿ ೪೮ ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ & ಮಂಜು ಇರಲಿದ್ದು ಮಂಗಳವಾರದ ನಂತರ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ.