ಬೇಲೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಹಾಗೂ ತಾಲ್ಲೂಕು ಘಟಕ ಬೇಲೂರು ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಜಿಲ್ಲಾದ್ಯಂತ ಮಳೆಯಿಂದ ಹಾನಿಯಾದ ಮನೆಗಳಿಗೆ ತಾತ್ಕಾಲಿಕ ಪರಿಹಾರ ನೀಡುವ ಕಾರ್ಯಕ್ರಮದಡಿಯಲ್ಲಿ ಬೇಲೂರು ತಾಲ್ಲೂಕಿನ ತೀವ್ರ ಹಾನಿಗೋಳಗಾದ 10 ಮನೆಗಳಿಗೆ ತತ್ ಕ್ಷಣದ ಪರಿಹಾರವಾಗಿ ಒಂದು ದೊಡ್ಡ ಟಾರ್ಪಲ್, ಅಡಿಗೆಗೆ ಬೇಕಾಗುವ ಪಾತ್ರೆಗಳು, ದಿನಸಿ ಪದಾರ್ಥಗಳು,(ಎಣ್ಣೆ,ಅಕ್ಕಿ, ಬೆಲ್ಲ, ಸಕ್ಕರೆ, ಕಾರದ ಪುಡಿ ಸಂಬಾರ ಪುಡಿ, ಅರಿಶಣಪುಡಿ, ಉಪ್ಪು, “ಬೇಳೆಕಾಳುಗಳು) ಮತ್ತು ಬೆಡ್ ಶೀಟ್ ಗಳು,ಟವಲ್,ಸೋಪು ಸ್ಯಾನಿಟರಿ ಪ್ಯಾಡ್ ಪೇಸ್ಟ್, ಬ್ರೇಶ್ ಗಳನ್ನ ಒಳಗಿಂಡ ಪರಿಹಾರ ಕಿಟ್ ಗಳನ್ನ ವಿತರಿಸಲಾಯಿತು.
ತಾಲ್ಲೂಕಿನ ಬಿಕ್ಕೊಡು, ಅರೆಹಳ್ಳಿ, ಸೊಮನಹಳ್ಳಿ, ಕೆಸಗಿಡು, ತಗರೆ, ಬೇಲೂರಿನ ಜೈ.ಬೀಮ್ ಬೀದಿ, ಹಳೆಬೀಡಿನ ದ್ಯಾವಪ್ಪನಹಳ್ಳಿ, ಎಂಟಿತೋಳಲು, ಮತ್ತಿತರ ಭಾಗದಲ್ಲಿ ತೀವ್ರಹಾನಿಗೊಳಗಾದ ಮನೆಗಳನ್ನ ಗುರುತಿಸಿ ಫಲಾನೂಭವಿಗಳ ಮನೆಗೆ ರೆಡ್ ಕ್ರಾಸ್ ತಂಡ ತೆರಳಿ ಆತ್ಮಸ್ಥರ್ಯ ತುಂಬುವ ಕೇಲಸ ಮಾಡಲಾಯಿತು.
ಪಲಾನುಭವಿಗಳನ್ನ ಗುರುತಿಸಿ ಸೌಲಭ್ಯ ತಲುಪಿಸುವಲ್ಲಿ ಗ್ರಾಮಲೆಕ್ಕಿಗರು, ಗ್ರಾಮ ಸಹಾಯಕರು ಜೋತೆಯಾದರರು.ರೆಡ್ ಕ್ರಾಸ್ ಘಟಕದ ಜಿಲ್ಲಾ ಸಭಾಪತಿ ಹೆಮ್ಮಿಗೆ ಮೊಹನ್ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ನಿರ್ದೇಶಕರಾದ ಅಂಜದ್ ಖಾನ್,ಕೆ.ಟಿ ಜಯಶ್ರೀ, ಹೆಚ್.ಡಿ ಕುಮಾರ್ ಹಾಗೂ ಬೇಲೂರು ತಾಲ್ಲೂಕು ರೆಡ್ ಕ್ರಾಸ್ ಸಭಾಪತಿಗಳಾದ ರವಿಕುಮಾರ್ ಬಲ್ಲೇನಹಳ್ಳಿ ಹಾಜರಿದ್ದರು.