ಮಹದೇವಪುರ: ಕಾಡುಬೀಸನ ಹಳ್ಳಿಯ ನ್ಯೂ ಹಾರಿಜನ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹದೇವಪುರ ವಿಧಾನ ಸಭಾ ಕ್ಷೇತ್ರದ ಟಾಸ್ಕ್
ಫೋರ್ಸ್ಗಳನ್ನು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಉದ್ಘಾಟಿಸಿದರು
ನಂತರ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಕಳೆದ4 ವರ್ಷಗಳ ಅವಧಿಯಲ್ಲಿ ಟಾಸ್ಕ್ ಫೋರ್ಸ್ನ ಸದಸ್ಯರಾಗಿ,
ಉಪ ಸಮಿತಿಗಳ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ಸ್ವಯಂ ಸೇವಕರಿಗೆ, ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ವೈಯುಕ್ತಿಕವಾಗಿ ಮತ್ತು ಟಾಸ್ಕ್ ಫೋರ್ಸ್ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ತಮ್ಮೆಲ್ಲರ ಶ್ರಮದಿಂದಾಗಿ ಮಹದೇವಪುರ ಬದಲಾಗುತ್ತಿದೆ. ಯೋಚನೆ ನನ್ನದಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ತಮ್ಮೆಲ್ಲರ ಸಹಕಾರದೊರೆತಿದ್ದು,
ಆ ಕಾರಣಕ್ಕೆ ಯಶಸ್ವಿ ಯಾಗಲು ಸಾಧ್ಯವಾಗಿದೆ. ಎಲ್ಲಾ ಸ್ವಯಂಸೇವಕರು ಕ್ಷೇತ್ರದಾದ್ಯಂತ ಯಾವುದಾದರೂ ಒಂದು ಟಾಸ್ಕ್ ಫೋರ್ಸ್ನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ನೂತನವಾಗಿ ಸೇರ್ಪಡೆಗೊಂಡ ಸ್ವಯಂ ಸೇವಕರಿಗೆ ತಿಳಿಸಿದರು.ನಿಮ್ಮೆಲ್ಲರ ಆಶೀರ್ವಾದದಿಂದ ನಾನು 15 ವರ್ಷದಿಂದ ಹಾಗೂ ನನ್ನ ಧರ್ಮಪತ್ನಿ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಕಳೆದ 1 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ.
ಕಳೆದ ಒಂದು ವರ್ಷಗಳಿಂದ ಟಾಸ್ಕ್ ಫೋರ್ಸ್ನ ಅನೇಕ ಕೆಲಸಗಳುಬಾಕಿ ಉಳಿದಿತ್ತು, ಹಾಗಾಗಿ ನೂತನ ಸಮಿತಿಯನ್ನು ರಚಿಸಿರಲಿಲ್ಲ ಇನ್ನೂಅನೇಕಾರು ಕೆಲಸಗಳು ಬಾಕಿ ಉಳಿದಿದ್ದು, ಅವುಗಳ ಕೆಲಸಗಳು ಭರದಿಂದ ಸಾಗುತ್ತಿದೆ. ಸ್ವಯಂಸೇವಕರು ತಮ್ಮ ಟಾಸ್ಕ್ ಫೋರ್ಸ್ನಲ್ಲಿ ಏನೇ ಸಮಸ್ಯೆಗಳು ಬಂದರೂ ಅದನ್ನು ಆಯಾ ಟಾಸ್ಕ್ ಫೋರ್ಸ್ ಅಧ್ಯಕ್ಷರುಅಥವಾ ಉಪಾಧ್ಯಕ್ಷರ ಮೂಲಕ ಅಧಿಕಾರಿಗಳ ಗಮನಕ್ಕೆ ತರಬೇಕು.
ಅಧಿಕಾರಿಗಳು ನಮ್ಮ ಅಡಿಯಾಳಲ್ಲ, ನಾವು ಅಧಿಕಾರಿಗಳಿಗೆ ಸಹಾಯಕ ವಾಗಿ ಕೆಲಸ ಮಾಡಬೇಕು. ನಾವೆಲ್ಲರೂ ಸೇರಿ ಯಶಸ್ವಿಯಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ರಾಜ್ಯಸಭಾ ಸದಸ್ಯರಾದ ಕೆ. ಸಿ. ರಾಮಮೂರ್ತಿ, ಕುಪೇಂದ್ರ ರೆಡ್ಡಿ, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ತಹಸೀಲ್ದಾರ್, ರವಿ ಕುಮಾರ್, ಇ.ಒ. ವಸಂತ್ ಕುಮಾರ್, ನಗರ ಮಂಡಲ ಅದ್ಯಕ್ಷ ಮನೋಹರ ರೆಡ್ಡಿ, ಗ್ರಾಮಾಂತರ ಮಂಡಲ, ಅಧ್ಯಕ್ಷ ನಟರಾಜ, ವೆಂಕಟಸ್ವಾಮಿ ರೆಡ್ಡಿ, ಎಲ್. ರಾಜೇಶ್, ಮಹೇಂದ್ರ ಮೋದಿ, ಮಾರಪ್ಪ, ಮಹದೇವಪುರ ಕ್ಷೇತ್ರದ ಟಾಸ್ಕ್ ಫೋರ್ಸ್ ಪದಾಧಿಕಾರಿಗಳು ಇದ್ದರು.