ಮುಳಬಾಗಿಲು: ಕೇಂದ್ರ ಮತ್ತು ರಾಜ್ಯ ಸರಕಾರಿ ಮಹತ್ವಕಾಂಕ್ಷಿ ಯೋಜನೆಯದ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಜಲಸಂಜೀವಿನಿ 2.0 ಎಂಬ ಯೋಜನೆಯ ಪ್ರಾಯೋಗಿಕ ಅನು ರಾಜ್ಯದ 8 ಜಿಲ್ಲೆಗೆ 8 ಗ್ರಾಮ ಪಂಚಾಯಿತಿ ಆಯ್ಕೆ ಮಾಡಲಾಗಿದೆ 8 ಗ್ರಾಮ ಪಂಚಾಯಿತಿಗಳಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರ ಗ್ರಾಮ ಪಂಚಾಯಿತಿಯು ಕೂಡ ಆಯ್ಕೆಯಾಗಿರುತ್ತದೆ ಎಂದು ನರೇಗ ಯೋಜನೆಯ ತೋಟಗಾರಿಕೆ ಜಂಟಿ ನಿರ್ದೇಶಕ ಶ್ರೀ ಶೈಲಾ ಬಿ ದಿಡ್ಡಿಮನಿ ತಿಳಿಸಿದರು.
ಅವರು ತಾಲ್ಲೂಕಿನ ದೇವರಾಯಸಮುದ್ರ ಗ್ರಾ.ಪಂ ಸಭಾಂಗಣದಲ್ಲಿ ಜಲ ಸಂಜೀವಿನಿ ಕಾರ್ಯಕ್ರಮ ಅನುಷ್ಟಾನ ಮಾಡುವ ನಿಟ್ಟಿನಲ್ಲಿ ಅಕಾರಿಗಳು ಹಾಗೂ ಜನಪ್ರತಿನಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಈ ಯೋಜನೆ ಮುಖ್ಯ ಉದ್ದೇಶ ದಿನ್ನೆಯಿಂದ ಕಣಿವೆಯವರೆಗೆ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿ ಜಲ ಮೂಲಗಳಾದಂತಹ ಕೆರೆ, ಕಲ್ಯಾಣಿ, ರಾಜಕಾಲುವೆ, ಕಲ್ಲುತಡೆ, ಚೆಕ್ ಡ್ಯಾಮ್, ಗೋಕಟ್ಟೆ, ನಾಲಾ ಬದು, ಗೋಮಳ ಅಭಿವೃದ್ಧಿ ಕಾಮಗಾರಿಗಳು, ವೈಯಕ್ತಿಕ ಕಾಮಗಾರಿಗಳಾದಂತಹ ಬದು ನಿರ್ಮಾಣ, ಕೃಷಿ ಹೊಂಡ, ಕೃಷಿ ಅರಣ್ಯೀಕರಣ, ತೋಟಗಾರಿಕೆ ಕಾಮಗಾರಿಗಳು, ಅಭಿವೃದ್ಧಿಪಡಿಸುವಂತಹ ಗುರಿಯನ್ನು ಹೊಂದಿರುತ್ತದೆ ಎಂದು ತಿಳಿಸಿದರು.
ಸದರಿ ಗ್ರಾ.ಪಂ ವ್ಯಾಪ್ತಿಯಲ್ಲಿ 350 ಕಾಮಗಾರಿಗಳನ್ನು 6 ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಳಿಸಬೇಕಾಗಿದೆ ಇದಕ್ಕೆ ಅಕಾರಿಗಳು, ಜನಪ್ರತಿನಿಗಳು, ಸಂಪೂರ್ಣ ಸಹಕಾರ ನೀಡಬೇಕೆಂದು ತಿಳಿಸಿದರು. ಇದು ಸಮುದಾಯ ಆದಾರಿತ ಕಾರ್ಯಕ್ರಮವಾಗಿರುವ ಹಿನ್ನಲೆಯಲ್ಲಿ ಸಮುದಾಯ ಸಹಕಾರ ಪಡೆಯುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಒಂದು ವಾರದ ಒಳಗೆ ತಯಾರಿಸಿ ಕಚೇರಿಗೆ ಕಳುಹಿಸಿಕೊಡಬೇಕು ಎಂದು ತಿಳಿಸಿದರು. ಮುಳಬಾಗಲು ತಾಲ್ಲೂಕಿನ ನರೇಗ ಯೋಜನೆಯಡಿ ಹೆಚ್ಚಿನ ಕಾಮಗಾರಿಗಳನ್ನು ನಡೆಸುವ ಮೂಲಕ ಜಿಲ್ಲೆಯಲ್ಲೇ ಮೊದಲನೇ ಸ್ಥಾನ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ತಾ.ಪಂ ಇಓ ಕಾಮಗಾರಿಗಳನ್ನು ಸಂಪೂರ್ಣ ಅನುಷ್ಟಾನಗೊಳಿಸುವಲ್ಲಿ ಶ್ರಮವಹಿಸುತ್ತಿದ್ದಾರೆ ಎಂದರು. ಎನ್ಆರ್ಎಂ ಕಾಮಗಾರಿಯ ಕ್ರಿಯಾ ಯೋಜನೆ, ಜಿಐಎಸ್ ಪ್ಲಾನಿಂಗ್, ಪ್ರಗತಿ ಪರಿಶೀಲನೆ, ಹಾಗೂ ಕ್ಷೇತ್ರ ಬೇಟಿ ನೀಡಲಾಯಿತು.
ತಾ.ಪಂ ಇಓ ಡಾ.ಕೆ. ಸರ್ವೇಶ್, ಗ್ರಾ.ಪಂ ಅಧ್ಯಕ್ಷ ಶ್ರೀದೇವಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣ, ನರೇಗ ಯೋಜನೆಯ ಸಹಾಯಕ ನಿರ್ದೇಶಕ ರವಿಚಂದ್ರ, ಪಿಡಿಓ ರಮೇಶ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ರೇಷ್ಮೇ ಸಹಾಯಕ ನಿರ್ದೇಶಕ ವೆಂಕಟೇಶ್, ಜಲಾನಯನ ಇಲಾಖೆಯ ರಮೇಶ್, ಎಪ್ಇಎಸ್ ಸಂಸ್ಥೆಯ ಲೋಕೇಶ್, ನರೇಗ ತಾಂತ್ರಿಕ ಸಂಯೋಜಕ ಸುಬ್ರಮಣಿ, ಇಂಜಿನಿಯರ್ ಸುಬ್ರಮಣ್ಯಚಾರಿ,ತೇಜಸ್ವನಿ.ಐಸಿ ಸಂಯೋಜಕ ಮುರಳಿ, ಗ್ರಾ.ಪಂ ಸದಸ್ಯರಾದ ಮಂಜುನಾಥ್, ಚಂಗಲರಾಯಪ್ಪ, ಮಂಜುನಾಥ್, ಮುಖಂಡರಾದ ನಾರಾಯಣಸ್ವಾಮಿ, ಚಿನ್ನಪ್ಪಯ್ಯ, ಅಭಿಷೇಕ್, ನರೇಗ ಸಿಬ್ಬಂದಿ ಹಾಜರಿದ್ದರು.