ಲಯನ್ಸ್ ಕ್ಲಬ್ ಚಟುವಟಿಕೆಗಳಲ್ಲಿ ಸಮುದಾಯ ಸೇವಾ ಯೋಜನೆಗಳು, ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳು ಪ್ರಮುಖವಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನಗರದ ನಂದಿನಿ ಲೇಔಟ್ ಕ್ಲಬ್ ನಲ್ಲಿ 42ನೇ ಚಾರ್ಟರ್ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮಹಾಲಕ್ಷ್ಮಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಪದ್ಮ ಸುಶೀಲಾ ವಹಿಸಿದ್ದರು. ಎನ್ ಮೋಹನ್ ಕುಮಾರ್ ಪಿ.ಎಂ. ಜೆ. ಎಫ್. ಜಿಲ್ಲಾ ಗವರ್ನರ್ ರವರು ಮತ್ತು ಪ್ರೇಮಾ ಮೋಹನ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೋಹನ್ ಕುಮಾರ್ ಅವರು ಮಹಾಲಕ್ಷ್ಮಿ ಲಯನ್ಸ್ ಕ್ಲಬ್ ಚಟುವಟಿಕೆಗಳನ್ನು ಶ್ಲಾಘಿಸಿದರು. ವಾರ್ಷಿಕ ಸಭೆಯಲ್ಲಿ ಮುಂದಿನ ಸಾಮಾಜಿಕ ಚಟುವಟಿಕೆಗಳ ಕುರಿತು ಸೂಕ್ತ ಸಲಹೆಗಳನ್ನು ಚರ್ಚಿಸಲಾಯಿತು.
ಹಿರಿಯ ಸದಸ್ಯರಿಗೆ ಸೇವಾ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ , ರಾಮಚಂದ್ರ, ರಾಜನ್, ಕೃಷ್ಣಮೂರ್ತಿ, ಭಾರತಿ ಕೃಷ್ಣಮೂರ್ತಿ, ಅಶೋಕ ಶೆಟ್ಟಿ, ಕಾರ್ಯದರ್ಶಿಗಳಾದ ದಾಸರಿ ವೆಂಕಟೇಶ್ವರ ರಾವ್, ಮತ್ತು ಮುರಳಿಧರ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.ರಾಜಾರಾಮ್ ಶೆಟ್ಟಿ, ಉಪ್ಪಳ ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. .ಡಾ. ಶ್ರೀಲತಾ. ಎ. ರವರು ಮುಖ್ಯ ಅತಿಥಿಗಳನ್ನ ಪರಿಚಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಡಾ. ಅಮೂಲ್ಯ ರಾಯ್ ಅವರು ವಂದನಾರ್ಪಣೆ ಮಾಡಿದರು.