ಬೆಂಗಳೂರು: ವೈಯಾಲಿಕಾವಲ್ನಲ್ಲಿ ಭೀಕರವಾಗಿ ಕೊಲೆಯಾಗಿದ್ದ ಮಹಾಲಕ್ಷ್ಮೀ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತ ಆರೋಪಿ ಎನ್ನಲಾದವನು ಒಡಿಶಾ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಕ್ತಿ ರಂಜನ್ ರಾಯ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿಯಾಗಿದ್ದಾನೆ. ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡ್ತಿದ್ದ ಆರೋಪಿ ಪಂಡಿ ಗ್ರಾಮ ಬೂತಕಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗಾಗಲೇ ಬೆಂಗಳೂರು ಪೊಲೀಸರು ಆರೋಪಿ ವಿಚಾರಣೆಗಾಗಿ ಒಡಿಶಾ ರಾಜ್ಯಕ್ಕೆ ತೆರಳಿದ್ದಾರೆ.
ಮಹಾಲಕ್ಷ್ಮಿಯನ್ನು ಕೊಲೆ ಮಾಡಿ ತನ್ನ ಸ್ವಗ್ರಾಮ ಬೂತಕಪುರಕ್ಕೆ ತೆರಳಿದ್ದ ಆರೋಪಿ ಮನೆಯಿಂದ ಹೊರಹೋಗುವ ಸ್ಕೂಟಿಯಲ್ಲಿ ಹೋಗಿದ್ದ ನಿನ್ನೆ ಬೆಳಗ್ಗೆ ಕುಳೆಪಾದ ಸ್ಮಶಾನದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಲ್ಯಾಪ್ ಟ್ಯಾಪ್ ಅನ್ನು ಸ್ಕೂಟಿಯಲ್ಲಿಯೇ ಇಟ್ಟು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಘಟನಾ ಸ್ಥಳಕ್ಕೆ ತೆರಳಿದ್ದ ಆರ್ ಡಿ ಪಂಡಿ ಪೆÇಲೀಸರು ಭದ್ರಕ್ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದಾರೆ. ಧುಶೂರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದ್ದು, ಆತನ ಬಳಿ ಇದ್ದ ಡೈರಿ ಲ್ಯಾಪ್ ಟ್ಯಾಪ್ ವಶಕ್ಕೆ ಪಡೆದಿದ್ದಾರೆ.