ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ತನಿಖೆ ವೇಳೆ ಬೆಚ್ಚಿಬೀಳಿಸುವ ವಿಚಾರ ಬೆಳಕಿಗೆ ಬಂದಿದೆ. ಮಹಾಲಕ್ಷ್ಮಿಯನ್ನ ಕೊಂದು ಶವ ಸಾಗಾಟ ಮಾಡಲಾಗದೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.ಬರೋಬ್ಬರಿ 59 ತುಂಡುಗಳನ್ನಾಗಿ ಮಾಡಿರೋದು ಯಾಕೆ ಎಂದು ಪತ್ತೆ ಮಾಡಲಾಗುತ್ತಿದೆ. ರುಂಡ ಮುಂಡ ಕೈಕಾಲು ಕತ್ತರಿಸಿ ಬೇರ್ಪಡಿಸಿರೋ ಹಂತಕ.
ಈ ವೇಳೆ ಪ್ರಿಡ್ಜ್ನಲ್ಲಿದ್ದ ವಸ್ತುಗಳನ್ನ ಬಿಸಾಡಿ ಒಳಗೆ ಇಡಲು ಪ್ರಯತ್ನ ಮಾಡಿದ್ದಾನೆ. ಕಾಲು ಮತ್ತು ರುಂಡ ಮಾತ್ರ ಪ್ರಿಡ್ಜ್ ಕೆಳ ಲೇಯರ್ ನಲ್ಲಿ ಇಡಲು ಆಗಿದೆ. ಆದರೆ ಮುಂಡ ಒಳಗೆ ಸೇರದ ಕಾರಣ ಫ್ರಿಡ್ಜ್ ನಲ್ಲಿ ಇಡಲು ಆಗದೆ ಪರದಾಡಿದ್ದಾನೆ.ಈ ವೇಳೆ ಮುಂಡವನ್ನು ಮಟನ್ ಕತ್ತರಿಸದಂತೆ ಚಿಕ್ಕ ಚಿಕ್ಕ ಪೀಸ್ಗಳಾಗಿ ಕಟ್ ಮಾಡಿ ಒಳಗೆ ಜೋಡಣೆ ಮಾಡಿದ್ದಾನೆ. ಇದೇ ವೇಳೆ ದೇಹದೊಳಗಿನ ಅಂಗವೂ ಕೊಡಾ ಹೊರ ಬಂದಿದ್ದು, ಪ್ರತ್ಯೇಕವಾಗಿಟ್ಟಿದ್ದ. ಇಡೀ ದಿನ ಮನೆಯಲ್ಲೇ ಹಂತಕ ಉಳಿದಿದ್ದು, ಕೊಲೆ ಮಾಡಿ ಕತ್ತರಿಸಿದ್ದಾನೆ.
ಬಳಿಕ ಕೈಕಾಲು ಮುಖ ತೊಳೆದುಕೊಂಡು ಬಟ್ಟೆ ಬದಲಿಸಿಕೊಂಡು ರಾತ್ರಿ ವೇಳೆಗೆ ಪರಾರಿಯಾಗಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ.ಇದೇ ಕಾರಣಕ್ಕಾಗಿ ಹೆಚ್ಚು ಪೀಸ್ ಗಳನ್ನ ಮಾಡಿರೋದು ಪತ್ತೆಯಾಗಿದೆ. ಜೊತೆಗೆ ಉಸಿರುಗಟ್ಟಿಸಿ ಕೊಲೆ ಮಾಡಿದ ಶಂಕೆಯಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದ್ದು, ಮಹಾಲಕ್ಷ್ಮೀ ಗೆಳೆಯ ಆಶ್ರಪ್ ಬಗ್ಗೆ ಸಾಕಷ್ಟು ಅನುಮಾನವಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.