ಭಾರತ ಮಹಿಳಾ ತಂಡದ ಉಪ ನಾಯಕಿ ಸ್ಮೃತಿ ಮಂದಾನ ಐಸಿಸಿ ಮಹಿಳಾ ಟಿ೨೦ ರ್ಯಾಂಕಿಂಗ್ ಪಟ್ಟಿಯಲ್ಲಿ ೫ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಅಬ್ಬರದ ಬ್ಯಾಟರ್ ಶಫಾಲಿ ವರ್ಮಾ ಜಂಟಿ ೧೧ ಕ್ರಮಾಂಕದಲ್ಲಿ ಇದ್ದಾರೆ. ಹರ್ಮನ್ ಪ್ರೀತ್ ಒಂದು ಸ್ಥಾನ ಮೇಲೇರಿದ್ದರೆ, ಶಫಾಲಿ ನಾಲ್ಕು ಸ್ಥಾನ ಏರಿಕೆ ಕಂಡಿದ್ದಾರೆ.
ಉಳಿದಂತೆ ಜೆಮಿಯಾ ರಾಡ್ರಿಗ ೧೯ನೇ ಸ್ಥಾನದಲ್ಲಿದ್ದಾರೆ. ಅಗ್ರ ೨೦ ಬ್ಯಾಟರ್ಗಳ ಪಟ್ಟಿಯಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ. ರಿಚಾ ಘೋಷ್೨೪ ಕ್ರಮಾಂಕದಲ್ಲಿದ್ದಾರೆ. ಆಸ್ಟ್ರೇಲಿಯಾ ಬೆಥ್ ಮೂನಿ ೭೬೯ ಅಂಕಗಳೊಂದಿಗೆ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರ ಕ್ರಮಾಂಕದಲ್ಲಿದ್ದಾರೆ.ಬೌಲರ್ಗಳ ಪಟ್ಟಿಯಲ್ಲಿ ಸ್ಪಿನ್ನರ್ ದೀಪ್ತಿ ಶರ್ಮಾ ಮೂರನೇ ಕ್ರಮಾಂಕದಲ್ಲಿದ್ದು, ಸೀಮರ್ ರೇಣುಕಾ ಸಿಂಗ್ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ರಾಧಾ ಯಾದವ್ ೨೦ನೇ ಸ್ಥಾನದಲ್ಲಿ ಇದ್ದಾರೆ. ಯುವ ಸ್ಪಿನ್ನರ್ ಕರ್ನಾಟಕದ ಶ್ರೇಯಾಂಕಾ ಪಾಟೀಲ ೧೯ ಸ್ಥಾನ ಏರಿಕೆ ಕಂಡಿದ್ದು, ೪೧ನೇ ಕ್ರಮಾಂಕದಲ್ಲಿದ್ದಾರೆ. ಇಂಗ್ಲೆಂಡ್ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.