ಬೆಂಗಳೂರು: ಪಾಸ್ ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಮಹಿಳಾ ಟೆಕ್ಕಿಯನ್ನ ತಬ್ಬಿಕೊಂಡ ಆರೋಪದ ಮೇಲೆ ಪೊಲೀಸ್ ಕಾನ್ಸ್ಸ್ಟೇಬಲ್ ಸೇವೆಯಿಂದ ಅಮಾನತಾಗಿರುವ ಘಟನೆ ನಡೆದಿದೆ.
ಒಂದೇ ಒಂದು ಹಗ್ ಮಾಡು ಯಾರಿಗು ಹೇಳುವುದಿಲ್ಲ ಅಂತಾ ಮಹಿಳಾ ಟೆಕ್ಕಿಗೆ ಹಿಂಸೆ ನೀಡಿದ್ದ ಎನ್ನಲಾಗಿದೆ. ಬ್ಯಾಟರಾಯನಪುರ ಠಾಣೆಯ ಕಿರಣ್ ಅಮಾನತಾಗಿರುವ ಪೊಲೀಸ್ ಕಾನ್ ಸ್ಟೇಬಲ್ ಆಗಿದ್ದಾನೆ.ಬಾಪೂಜಿನಗರದ ಯುವತಿಯೊಬ್ಬಳು ಪಾಸ್ ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪಾಸ್ ಪೋರ್ಟ್ ವೇರಿಫಿಕೇಷನ್ ಎಂದು ಯುವತಿಯ ಮನೆಗೆ ಹೋಗಿದ್ದ.
ಎರಡು ಮೂರು ಬಾರಿ ಯುವತಿಯ ಮನೆಗೆ ಹೋಗಿ ಅಸಭ್ಯವಾಗಿ ವರ್ತಿಸಿದ್ದಾನೆ. ಮನೆಗೆ ಎಂಟ್ರಿ ಕೊಟ್ಟು ಅರ್ಧ ಬಾಗಿಲು ಮುಚ್ಚಿದ ಪೇದೆ. ನೀನು ನನಗೆ ಸಹಕರಿಸಬೇಕು ನಿಮ್ಮಣ್ಣ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್ ಪೋರ್ಟ್ ಕ್ಯಾನ್ಸಲ್
ಮಾಡ್ತೀನಿ ಎಂದು ಬೆದರಿಸಿ ದ್ದಾನೆ. ಡೋರ್ ಕ್ಲೋಸ್ ಮಾಡುವಂತೆ ಯುವತಿಗೆ ಪೊಲೀಸಪ್ಪ ಕಿರಣ್ ಆಗ್ರಹ ಪಡಿಸಿದ್ದು, ಯುವತಿ ಒಪ್ಪದಿದ್ದಾಗ ತಾನೆ ಹೋಗಿ ಡೋರ್ ಕ್ಲೋಸ್ ಮಾಡಿದ್ದಾನೆ.
ಯಾರಿಗೂಹೇಳಬೇಡ ಒಂದೇ ಒಂದ್ ಸಲ ಹಗ್ ಮಾಡ್ತೀನಿ ಅಂತಾ ಕಿರುಕುಳ ನೀಡಿದ್ದಾನೆ.ಆ ಬಳಿಕ ಯುವತಿಯ ಅಣ್ಣ ರೂಂನಲ್ಲಿರೋದನ್ನ ನೋಡಿದ್ದ ಪೇದೆ ನೀನು ಒಳಗೆ ಇದ್ದೀಯ ಅಂತಾನೆ ನಾನೆ ಹಿಂಗೆ ಮಾತಾಡಿದ್ದು, ನಿನ್ ತಂಗಿ ನನ್ ತಂಗಿ ಇದ್ದಹಾಗೆ ಅಂದಿದ್ದ ಪೆÇಲೀಸಪ್ಪ ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿ ಪೇದೆ ಕಿರಣ್ನನ್ನು ಡಿಸಿಪಿ ಗಿರೀಶ್ ಸಸ್ಪೆಂಡ್ ಮಾಡಿದ್ದಾರೆ.