ಮೆಲ್ಬೋರ್ನ್: ಅನಿರೀಕ್ಷಿತ ಪ್ರದರ್ಶನ ನೀಡಿದ ಮ್ಯಾಡಿಸನ್ ಕೀಸ್ ಮೂರು ಸೆಟ್ಗಳ ಪ್ರಬಲ ಹೋರಾಟದಲ್ಲಿ ವಿಶ್ವದ 2ನೇ ರ್ಯಾಂಕ್ನ ಇಗಾ ಸ್ವಿಯಾಟೆಕ್ ಅವರಿಗೆ ಆಘಾತ ನೀಡುವುದರೊಂದಿಗೆ ಮೊದಲ ಬಾರಿ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಆಸ್ಪ್ರೇಲಿಯನ್ ಓಪನ್ನ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ 19ನೇ ಶ್ರೇಯಾಂಕಿತೆ ಅಮೆರಿಕದ 5-7, 6-1, 7-6(10-8) ಸೆಟ್ಗಳಿಂದ ಪೋಲೆಂಡ್ನ ಸ್ವಿಯಾಟೆಕ್ಗೆ ಅಚ್ಚರಿಯ ಸೋಲುಣಿಸಿದರು. 2 ಗಂಟೆ 35 ನಿಮಿಷ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಆರಂಭಿಕ ಸೆಟ್ಟನ್ನು ಸೋತ 29 ವರ್ಷದ ಮ್ಯಾಡಿಸನ್, ನಂತರದ ಎರಡು ಸೆಟ್ಗಳಲ್ಲಿ ಪ್ರಾಬಲ್ಯ ಸಾಧಿಸಿದರು.
ಮೂರನೇ ಸೆಟ್ ಉಭಯ ಆಟಗಾರ್ತಿಯರ ಪ್ರಬಲ ಹೋರಾಟಕ್ಕೆ ಸಾಕ್ಷಿಯಾಯಿತು ಆದಾಗ್ಯೂ ಟೈಬ್ರೇಕರ್ನಲ್ಲಿ ಸೆಟ್ ಗೆದ್ದ ಅಮೆರಿಕದ ಆಟಗಾರ್ತಿ, ಸ್ವಿಯಾಟೆಕ್ ಅವರ 6ನೇ ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆಲ್ಲುವ ಕನಸನ್ನು ಭಗ್ನಗೊಳಿಸಿದರು.