ಬೆಂಗಳೂರು: ಮಹಿಳೆಯರಿಗೆ ವಿದ್ಯೆಯ ಜೊತೆಗೆ ಸಾಮಾಜಿಕ ಜ್ಞಾನ ಇಂದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿರವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಎಪಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಬೆಳೆಯುತ್ತಿರುವ ನಗರಗಳಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿಯೂ ಸಹ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತವೆ ಇದಕ್ಕೆ ಕಾರಣ. ಪ್ರಶ್ನೆ ಮಾಡದೆ ಇರುವುದು ಮತ್ತು ಕಾನೂನಿನ ಅರಿವು ಇಲ್ಲದೆ ಇರುವುದು.
ಹೆಣ್ಣು ಮಕ್ಕಳು ಇಂದು ಒಂದು ಮಹಾ ಶಕ್ತಿಯಾಗಿ ಬೆಳೆದಿದ್ದಾರೆ. ವಿದ್ಯಾರ್ಥಿ ಸಮು ದಾಯ ಇಂದು ಶಿಕ್ಷಣದಲ್ಲಿ ದೊಡ್ಡ ಪ್ರಗತಿಯ ಹೆಜ್ಜೆಗಳನ್ನು ಇಟ್ಟಿದೆ. ಶಿಕ್ಷಣ ಸಂಸ್ಥೆಗಳಲ್ಲಿಯೂ ಸಹ ದೌರ್ಜನ್ಯ ಪ್ರಕರಣಗಳು ಕೇಳಿ ಬರುತ್ತಿ ರುವುದು ಮನಸ್ಸಿಗೆ ನೋವುಂಟು ಮಾಡುತ್ತಿದೆ. ಇದಕ್ಕೆ ಕಾರಣ ದೌರ್ಬಲ್ಯ ಮತ್ತು ಪ್ರಶ್ನೆ ಮಾಡದೆ ಇರುವ ಸಂಕುಚಿತತೆ. ಹಾಗಾಗಿ ವಿದ್ಯಾರ್ಥಿಗಳ ಮೇಲೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.
ಕಾನೂನು ಸುವ್ಯವಸ್ಥೆ ಅದರ ಅಡಿಯಲ್ಲಿ ನಾವುಗಳು ನಮಗೆ ದೊರೆಯಬೇಕಾದ ಹಕ್ಕುಗಳ ಬಗ್ಗೆ ಸದಾ ಜಾಗೃತವಾಗಿರಬೇಕು ಮತ್ತು ಅದನ್ನು ಪಡೆಯುವ ಛಲ ಇರಬೇಕು. ಹಾಗಿರುವಾಗ ಮಾತ್ರ ಮಹಿಳೆಯರ ಪ್ರಾಣ ಮತ್ತು ಮಾನ ಎರಡನ್ನು ರಕ್ಷಿಸಬಹುದು. ಒಬ್ಬ ಸಾಮಾನ್ಯ ಶಿಕ್ಷಕಿಯಾಗಿದ್ದ ನಾನು ಇಂದು ಉನ್ನತ ಸ್ಥಾನದಲ್ಲಿರಲು ನಾನು ನಡೆದು ಬಂದ ಮತ್ತು ಅನುಸರಿಸಿದ ಕಾನೂನಾತ್ಮಕ ನಿಯಮಗಳು. ಗಟ್ಟಿಯಾಗಿ ಪ್ರಶ್ನೆ ಮಾಡುವ ಧ್ವನಿ. ಮತ್ತು ಮಹಿಳೆಯರಿಗೆ ಸಿಗಲೇಬೇಕಾದ ಹಕ್ಕುಗಳ ಕುರಿತಾಗಿ ನಿರಂತರ ಹೋರಾಟ ಮಾಡಿದ್ದು.
ನನ್ನನ್ನು ನೀವು ಉದಾರಣೆಯಾಗಿಟ್ಟುಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು. ಕಾಲೇಜು ಕ್ಯಾಂಪಸ್ ಗಳಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ, ಸುವ್ಯವಸ್ಥೆ ಮತ್ತು ಭದ್ರತೆ ನೋಡಿಕೊಳ್ಳುವುದು ಆಡಳಿತ ಮಂಡಳಿಯ ಅತ್ಯಂತ ದೊಡ್ಡ ಜವಾಬ್ದಾರಿಯಾಗಿದೆ. ವಿದ್ಯೆಯ ಜೊತೆಗೆ ಸಾಮಾಜಿಕ ಜ್ಞಾನ ಇಂದು ಅತ್ಯಗತ್ಯವಾಗಿದೆ ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲ ಸಂಗತಿಗಳು ನಮಗೆ ಮೊಬೈಲ್ ಮೂಲಕ ತಿಳಿಯುತ್ತದೆ. ಆದರೆ ಗೊತ್ತಿಲ್ಲದೇ ವಿದ್ಯಾರ್ಥಿಗಳ ಮೇಲೆ ನಡೆಯುವ ದೌರ್ಜನಗಳು ಮರೆಯಾಗಿ ಅವರ ಭವಿಷ್ಯ ಕುಂದುತ್ತಿದೆ.
ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಎಲ್ಲಾ ಕಾಲದಲ್ಲಿಯೂ ವಿದ್ಯಾರ್ಥಿನಿಯರ ಪರವಾಗಿ ಮತ್ತು ನಾಡಿನ ಎಲ್ಲಾ ಸಮಸ್ತ ಮಕ್ಕಳು ಮತ್ತು ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಿರುತ್ತದೆ. ಯಾವುದೇ ಸಂದರ್ಭದಲ್ಲಿ ಯಾವುದೇ ಕೇಸುಗಳನ್ನಾಗಲಿ ನಮ್ಮ ಬಳಿಗೆ ತಂದರೆ ಕಾನೂನಾತ್ಮಕವಾದ ಹೋರಾಟದ ಮೂಲಕ ಅವರಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು. ಸಮಾರಂಭದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಂವಾದದಲ್ಲಿ ಪಾಲ್ಗೊಂಡಿದ್ದರು.