ಬೆಂಗಳೂರು: ಚಿನ್ನಾಭರಣ ಕಳವು ಮಾಡುತ್ತಿದ್ದ ಮಮತಾ 34 ಎಂಬ ಮಹಿಳೆಯನ್ನು ಬಂಧಿಸಿ ಸುಮಾರು 3,00,000 ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ತಲಘಟ್ಟಪುರ ಪೊಲೀಸರು ಸ್ವಿಮ್ ಸ್ಕೇರ್ ಸ್ವಿಮ್ಮಿಂಗ್ ಪೂಲ್ ಗೆ ಪಿರಿಯಾದುದಾರರು ಸ್ವಿಮ್ಮಿಂಗ್ ಕ್ಯಾಂಪಿಗೆ ಹೋಗಿದ್ದು, ತನ್ನ ಚಿನ್ನದ ಮಾಂಗಲ್ಯ ಚೈನು ಹಾಗೂ ಎರಡು ಚಿನ್ನದ ಬಳೆಗಳನ್ನು ಬಟ್ಟೆಯ ಬ್ಯಾಗಿನಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಡ್ರೆಸ್ಸಿಂಗ್ ರೂಮ್ ಲಾಕರ್ ನಲ್ಲಿ ಇಟ್ಟಿರುತ್ತಾರೆ.
ಈಜು ಮುಗಿಸಿ ಬಂದು ನೋಡಿದಾಗ ಕಳವಾಗಿರುತ್ತದೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಮತಾರನ್ನು ತಲಘಟ್ಟಪುರ ಪೊಲೀಸರು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿರುತ್ತಾರೆ.