ಬೆಂಗಳೂರು: ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ರ ಕಾರಿಗೆ ಸರಕು ಸಾಗಣೆ ಆಟೋ ಡಿಕ್ಕಿ ಹೊಡೆದಿದೆ. ಬೆಂಗಳೂರು ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ಮಂಗಳವಾರ ಸಂಜೆ ಘಟನೆ ನಡೆದಿದ್ದು, ಈ ವೇಳೆ ದ್ರಾವಿಡ್ ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ನಡೆದಿದೆ.
ಕನ್ನಿಂಗ್ಹ್ಯಾಮ್ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ ದ್ರಾವಿಡ್ರ ಕಾರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿತ್ತು. ಆಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸರಕು ಸಾಗಣೆ ಆಟೋ ಚಾಲಕನು ದ್ರಾವಿಡ್ರ ಕಾರಿಗೆ ಹಿಂದಿನಿಂದ ವಾಹನ ಗುದಿಸಿದ್ದಾನೆ. ಇದರಿಂದ ಕೋಪಗೊಂಡ ದ್ರಾವಿಡ್ ಅವರು ಕಾರಿನಿಂದ ಕೆಳಗಿಳಿದು ಬಂದು ವಾಹನ ಜಖಂ ಆಗಿರುವುದನ್ನು ಕಂಡು ಆಟೋ ಚಾಲಕನಿಗೆ ಬೈದಿದ್ದಾರೆ. ನಂತರ ಇಬ್ಬರ ಮಧ್ಯೆ ಸಣ್ಣ ವಾಗ್ವಾದವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ದ್ರಾವಿಡ್ ಅವರು ಆಟೋ ಚಾಲಕನ ಮೊಬೈಲ್ ಸಂಖ್ಯೆ ಪಡೆದು ಸ್ಥಳದಿಂದ ನಿರ್ಗಮಿಸಿದರು. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಹೈಗ್ರೌಂಡ್ಸ್ ಸಂಚಾರ ಠಾಣೆ ಪೆÇಲೀಸರು ಹೇಳಿದ್ದಾರೆ.