ಬೆಂಗಳೂರು: 77 ನೇ ಸ್ವಾತಂತ್ರ್ಯ ದಿನೋತ್ಸವದ ಆಚರಣೆಯ ಪ್ರಯುಕ್ತ ಎಂಜಿ ರಸ್ತೆಯಲ್ಲಿರುವ ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಹೆಚ್ಚುವರಿ ಪೊಲೀಸರನ್ನು ನೇಮಿಸುವ ಮೂಲಕ ಬಿಗಿ ಭದ್ರತೆ ಕಲ್ಪಿಸಲಾಗಿದೆ.ಇಂದು ಬೆಳಿಗ್ಗೆ ಮೈದಾನದಲ್ಲಿ ನಡೆದಿರುವ ಸಿದ್ಧತೆಗಳ ಪರಿಶೀಲನೆ ಮತ್ತು ಕವಾಯತು ವೀಕ್ಷಿಸಿದ ನಗರ ಜಿಲ್ಲಾಧಿಕಾರಿ ಬಿಬಿಎಂಪಿ ಆಯುಕ್ತ ಹಾಗೂ ನಗರ ಪೊಲೀಸ್ ಆಯುಕ್ತರು ನಡೆದಿರುವ ಸಿದ್ಧತೆ ಬಗ್ಗೆ ವಿವರಣೆ ನೀಡಿದ್ದಾರೆ.
ಸುಮಾರು 1,783 ಪೊಲೀಸ್ ಸಿಬ್ಬಂದಿಯನ್ನು ಸ್ವಾತಂತ್ರ್ಯೋತ್ಸವ ಸುಸೂತ್ರವಾಗಿ ನಡೆಯಲು ರಕ್ಷಣೆಗಾಗಿ ನೇಮಿಸಲಾಗಿದೆ.13 ಸಂಚಾರಿ ಡಿಸಿಪಿ ಮತ್ತು ಕಾನೂನು, ಮತ್ತು ವ್ಯವಸ್ಥೆ ಡಿಸಿಪಿಗಳನ್ನು ನೇಮಿಸಲಾಗಿದ್ದು, 23 ಎಸಿಪಿ, 61 ಪೋಲಿಸ್ ಇನ್ಸ್ಪೆಕ್ಟರ್ಗಳು, 144 ಸಬ್ ಇನ್ಸ್ಪೆಕ್ಟರ್ಗಳು, ಅಂದಾಜು 1000 ಎ ಎಸ್ ಐ ಮತ್ತು ಕೆಳ ಹಂತದ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ.
ಮಾಣಿಕ್ ಷಾ ಪೆರೇಡ್ ಮೈದಾನದ 5 ಗೇಟ್ಗಳಲ್ಲಿ ಪೊಲೀಸರು ನಾಳೆ ರಾತ್ರಿಯಿಂದ ಕಾರ್ಯಕ್ರಮ ಮುಗಿಯುವ ತನಕ ಹದ್ದಿನ ಕಣ್ಣಿನಂತೆ ಕಾರ್ಯಕ್ರಮಕ್ಕೆ ಯಾವುದೇ ಅಡಚಣೆಯಾಗದಂತೆ ಕಾವಲು ಕಾಯಿಲಿದ್ದಾರೆ.ಸಮಾರಂಭಕ್ಕಾಗಿ ಬರುವವರನ್ನು ಮತ್ತು ಬ್ಯಾಗುಗಳನ್ನು ಶೋಧಿಸುವ ಯಂತ್ರಗಳನು ಸಹ ಉಪಯೋಗಿಸಲಿದ್ದಾರೆ.
ನೂರು ಸಿಸಿ ಕ್ಯಾಮೆರಾಗಳು, 10 ಕೆ ಎಸ್ ಆರ್ ಪಿ ಪಡೆಗಳು, 20 ಡಿ ಎಫ್ ಎಂ ಡಿ 40 ಹೆಚ್ಚು ಉಪಕರಣಗಳನ್ನು ಸಹ ಉಪಯೋಗಿಸಲಿದ್ದಾರೆ. ಇದಲ್ಲದೆ 120 ಪೊಲೀಸ್ ಸಿಬ್ಬಂದಿ ಪೊಲಿಸ್ ಸಮ ವಸ್ತ್ರವಿಲ್ಲದೆ ಇತರೆ ವಸ್ತ್ರಗಳನ್ನು ಧರಿಸಿ ಕಾರ್ಯಕ್ರಮ ನಡೆಯುವ ಸ್ಟೇಜ್ ಬಳಿ ಸುತ್ತಾಡುತ್ತಲಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.