ಮೈಸೂರು: ಚಲನಚಿತ್ರಗಳಲ್ಲಿ ಇದೊಂದು ವಿಭನ್ನ ಶೈಲಿಯ ಶೈಕ್ಷಣಿಕ ಸಾಮಾಜಿಕ ಚಲನಚಿತ್ರ ಎಂದು” ಮಾತಂಗಿ ದೀವಟಿಗೆ ಚಲನಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕ ವೃಂದ ತಮ್ಮ ತಮ್ಮ ಆನಿಸಿಕೆಗಳನ್ನು ವ್ಯಕ್ತಪಡಿಸಿತು.
ಮಾಲ್ ಆಫ್ ಮೈಸೂರು ಐನಾಕ್ಸ್ 3 ನೇ ಚಿತ್ರಮಂದಿರದ ದಸರಾ ಚಲನಚಿತ್ರೋತ್ಸವದಲ್ಲಿ ಹಲವಾರು ಚಲನಚಿತ್ರಗಳು ಮನರಂಜಿಸಿದವು. ” ಅವುಗಳಲ್ಲಿ ” ಮಾತಂಗಿ ದೀವಟಿಗೆ ” ಎಂಬ ಚಲನಚಿತ್ರವು ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಕಲಾತ್ಮಕವಾಗಿ ಅಲ್ಲಿ ನೆರೆದಿದ್ದ ಪ್ರೇಕ್ಷಕರ ಹೃದಯವನ್ನು ಸ್ಪರ್ಶಿಸಿತು.
ಚಲನಚಿತ್ರವನ್ನು ವೀಕ್ಷಿಸಿದ ಎಲ್ಲರೂ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಂಬಲಿಸುತ್ತಿದ್ದರು.ಕಲ್ಬುರ್ಗಿಯ ಪ್ರೊ ಸಮತಾ ಬಿ ದೇಶಮಾನೆಯವರ ಕುಟುಂಬದ ಶೈಕ್ಷಣಿಕ ಸಾಧನೆಯ ಕೃತಿಯು ಮಾತಂಗಿ ದೀವಟಿಗೆ ಹೆಸರಿನಲ್ಲಿ ಆತ್ಮ ಕಥೆಯ ರೂಪದಲ್ಲಿ ಪ್ರಕಟವಾಗಿದ್ದು, ಇದೇ ಹೆಸರಿನಲ್ಲಿ ಕಲಾತ್ಮಕ ಚಲನಚಿತ್ರಗಳ ನಿರ್ದೇಶಕ ಸಾಹಿತಿಯು ಕೂಡ ಆಗಿರುವ ಮಂಜು ಪಾಂಡವಪುರ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.
ದೇಶಮಾನ್ಯ ಕ್ರಿಯೇಷನ್ ಸಂಸ್ಥೆಯ ವತಿಯಿಂದ ಡಾ ಜಿ.ವೈ. ಪದ್ಮನಾಗರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮೌಲ್ಯವಿರುವ ಈ ಹಿಂದೆ ಚಲನಚಿತ್ರವು ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿಹಲವು ಭಾಗಗಳಲ್ಲಿ ಪ್ರದರ್ಶನದಲ್ಲಿ ಭಾಗಿಯಾಗಿ ವಿವಿಧ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ.
ಈ ಚಲನಚಿತ್ರ ಪ್ರದರ್ಶನಕ್ಕೆ ಪ್ರೊ ಸಮತಾಬಿ ದೇಶಮಾನೆ ಯವರ ಕುಟುಂಬ,ಕಲಾವಿದೆ ವನಿತ ಪ್ರದರ್ಶನ ಕಂಡು ಜೊತೆಗೆದೇಶದ ಮೈಸೂರ ಬಳಗ, ಪಾಂಡವಪುರದ ಮಾಡಿತು. ರಾಜೇಶ್ ಕುಟುಂಬ, ಪ್ರಸನ್ನ ಧನಂಜಯ್ ಬ್ಯಾಡರಹಳ್ಳಿ ಬಳಗ, ಶಾಂತಪ್ಪ ಶಿವಮೂರ್ತಿ, ಡಾಕ್ಟರ್ ವಿಜ
ಯಲಕ್ಷ್ಮಿ ದೇಶಮಾನೆಯವರ ಸಹೃದಯ ಬಳಗ, ಶಹಪುರದ ಚನ್ನಬಸವ, ಧಾರವಾಡ ಮತ್ತು ಮೈಸೂರಿನ ಸಮಸ್ತ ಸಾಂಸ್ಕೃತಿಕ ಬಳಗ ಚಲನಚಿತ್ರವನ್ನು ವೀಕ್ಷಣೆ ಮಾಡಿತು.