ದೇವನಹಳ್ಳಿ: 30ವರ್ಷಗಳ ಹೋರಾಟದ ಫಲವಾಗಿ ಒಳ ಮೀಸಲಾತಿಯನ್ನು ಆಯಾ ರಾಜ್ಯಗಳು ಅನುಷ್ಠಾನ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿತು, ಕೆಲವೊಂದು ರಾಜ್ಯಗಳಲ್ಲಿ ಆದೇಶ ಪಾಲಿಸಿ ಒಳ ಮೀಸಲಾತಿ ಜಾರಿಗೆ ತಂದಿವೆ, ಆದರೆ ನಮ್ಮ ರಾಜ್ಯದ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅನುಷ್ಠಾನ ಮಾಡಲು ಮೀನಾ-ಮೇಷ ಎಣಿಸುತ್ತಿದೆ, ಎಂದು ಕರ್ನಾಟಕ ಮಾದಿಗ ದಂಡೋರದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ತಿಳಿಸಿದರು.
ಅವರು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಒಳ ಮೀಸಲಾತಿ ಜಾರಿ” ಕುರಿತು ನಡೆದ ಸಭೆಯ ಬಳಿಕ ಮಾತನಾಡಿ ನಮ್ಮ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ತರಲು ಕೆಲವೊಂದು ಸಮುದಾಯದ ರಾಜಕಾರಣಿಗಳ ಪ್ರಭಾವ ಬೀರಿವೆ, ಕೋರ್ಟ್ ಆದೇಶವಿದ್ದರೂ ಇಷ್ಟಾದರೂ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮನೋಭಾವನೆ ತಾಳುತ್ತಿರುವುದು ಏಕೆ ? ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೆ ತರದೇ ಹೋದರೆ, ಡಿಸೆಂಬರ್ 14ರಂದು ಶಾಸಕರುಗಳ ಮನೆ ಮುಂದೆ ತಮಟೆ ಚಳುವಳಿ ಮಾಡಲು ನಿರ್ದರಿಸಲಾಗಿದೆ,
ನಂತರ 16ರಂದು ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸುವರ್ಣ ಸೌಧದ ಮುಂಭಾಗ ಭೃಹತ್ ಸಮ್ಮೇಳನ ಆಯೋಜಿಸಿ ಸರ್ಕಾರದ ಕಣ್ಣು ತೆರೆಸಲಾಗುವುದು, ಆದ್ದರಿಂದ ಪ್ರತಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.ಇದೇ ವೇಳೆ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಜಿ.
ಮಾರಪ್ಪ ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಎಂ.ವೆಂಕಟೇಶ್, ತಾಲ್ಲೂಕು ಉಪಾಧ್ಯಕ್ಷ ಮುನಿರಾಜು, ಪ್ರಧಾನಕಾರ್ಯದರ್ಶಿ ಬುಳ್ಳಹಳ್ಳಿ ಮುನಿರಾಜು, ಖಜಾಂಜಿ ಸಾವಕನಹಳ್ಳಿ ಶ್ರೀನಿವಾಸ್, ಕದಿರಪ್ಪ, ತಿರುಮಲೇಶ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಶಿವಾನಂದ್, ಹೊಸಕೋಟೆ ಪ್ರಕಾಶ್, ಹ್ಯಾಡಾಳ ದೇವರಾಜು, ಸೋಲೂರು ನಾಗರಾಜು, ಶಿವಾನಂದ್, ಗೋಪಾಲಸ್ವಾಮಿ, ಮುನಿರಾಜು, ನಾರಾಯಣಸ್ವಾಮಿ, ಸೇರಿದಂತೆ ಇತರರು ಇದ್ದರು.